ಉಳಿದ ಬ್ಯಾಟ್ಸ್ ಮನ್ ಗಳಿಗೆ ಮುಜುಗರ ಮಾಡಬೇಡಿ: ಕೊಹ್ಲಿಗೆ ಆ್ಯರೋನ್ ಫಿಂಚ್ ಸಲಹೆ

ಅತ್ಯುತ್ತಮ ಬ್ಯಾಟಿಂಗ್ ಶೈಲಿಯಿಂದ ಹಿಂದಿನ ದಾಖಲೆಗಳನ್ನು ಸರಿಗಟ್ಟುತ್ತಿರುವ ಕೊಹ್ಲಿ, ಇತರೆ ಬ್ಯಾಟ್ಸ್ ಮನ್ ಗಳಿಗೆ ಮುಜುಗರ ಉಂಟುಮಾಡಬಾರದೆಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: 2016ರ ಐಪಿಲ್ ಪಂದ್ಯಾವಳಿಗಳಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿರುವ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಎಂಬುದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.

4 ಸಾವಿರ ರನ್ ಗಳಿಸಿರುವ ವಿರಾಟ್ ಕೊಹ್ಲಿ, ಬೌಲರ್ ಗಳ ಯಾವುದೇ ರೀತಿಯ ದಾಳಿಗೆ ಎದೆಗುಂದುವುದಿಲ್ಲ. 27 ವರ್ಷದ ಕೊಹ್ಲಿ ಇಡೀ ದೇಶವೇ ಅವರ ರನ್ ಗಳಿಕೆ ರೀತಿಯ ಬಗ್ಗೆ ಹುಬ್ಬೇರುವಂತೆ ಮಾಡಿದೆ.

ಕೊಹ್ಲಿ ಜೊತೆ ಹೇಗೆ ಡೀಲ್ ಮಾಡಬೇಕೆಂಬುದು ಬೌಲರ್ ಗಳನ್ನು ಚಿಂತೆಗೀಡುಮಾಡಿದೆ. ಕೊಹ್ಲಿ ಶತಕದ ನಂತರ ತಾವು ವಿರಾಟ್ ನೊಂದಿಗೆ  ಹೇಗೆ ಆಟವಾಡುವುದು ಎಂದು ಯೋಚನೆ ಮಾಡುವಂತಾಗಿದೆ.

ಬ್ಯಾಟಿಂಗ್ ಮಾಡುವುದು ತುಂಬಾ ಸುಲಭದ ಕೆಲಸ ಎನ್ನುವಂತೆ ತೋರಿಸಬೇಡಿ ಎಂದು ವಿರಾಟ್ ಕೊಹ್ಲಿಗೆ ಗುಜರಾತ್ ಲಯನ್ಸ್ ಬ್ಯಾಟ್ಸ್ ಮನ್ ಆ್ಯರೋನ್ ಫಿಂಚ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಶೈಲಿಯಿಂದ ಹಿಂದಿನ ದಾಖಲೆಗಳನ್ನು ಸರಿಗಟ್ಟುತ್ತಿರುವ ಕೊಹ್ಲಿ, ಇತರೆ ಬ್ಯಾಟ್ಸ್ ಮನ್ ಗಳಿಗೆ ಮುಜುಗರ ಉಂಟುಮಾಡಬಾರದೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com