ಪ್ಲೇ ಆಫ್ ಕನಸು ನನಸು ಮಾಡಿಕೊಂಡ ಕೆಕೆಆರ್

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಸಾಂಘಿಕ ಹೋರಾಟ ನೀಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಹೈದರಾಬಾದ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್-9 ಟೂರ್ನಿಯ ಪ್ಲೇ ಆಫ್ ಸುತ್ತು ಪ್ರವೇಶಿಸಿದೆ...
ಪಂದ್ಯ ಶ್ರೇಷ್ಠ ಯೂಸುಫ್ ಪಠಾಣ್ (ಕ್ರಿಕ್ ಇನ್ಫೋ ಚಿತ್ರ)
ಪಂದ್ಯ ಶ್ರೇಷ್ಠ ಯೂಸುಫ್ ಪಠಾಣ್ (ಕ್ರಿಕ್ ಇನ್ಫೋ ಚಿತ್ರ)

ಕೋಲ್ಕತಾ: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಸಾಂಘಿಕ ಹೋರಾಟ ನೀಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಹೈದರಾಬಾದ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು  ಗೆಲ್ಲುವ ಮೂಲಕ ಐಪಿಎಲ್-9 ಟೂರ್ನಿಯ ಪ್ಲೇ ಆಫ್ ಸುತ್ತು ಪ್ರವೇಶಿಸಿದೆ.

ಯೂಸುಫ್ ಪಠಾಣ್(ಅಜೇಯ 52ರನ್), ಮನೀಷ್ ಪಾಂಡೆ (48 ರನ್) ಭರ್ಜರಿ ಬ್ಯಾಟಿಂಗ್ ಮತ್ತು ಸುನಿಲ್ ನರೇನ್ (26 ಕ್ಕೆ 3) ಮತ್ತು ಕುಲ್​ದೀಪ್ ಯಾದವ್ (28 ಕ್ಕೆ 2) ಭರ್ಜರಿ ಬೌಲಿಂಗ್  ಕೋಲ್ಕತಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಕೋಲ್ಕತ ನೈಟ್ ರೈಡರ್ಸ್ ತಂಡದ ಮೊತ್ತ 57 ರನ್  ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಒಂದಾದ ಯೂಸುಫ್ ಪಠಾಣ್ (ಅಜೇಯ 52) ಮತ್ತು ಮನೀಷ್ ಪಾಂಡೆ (48ರನ್) ತಂಡಕ್ಕೆ  ಆಸರೆ ಒದಗಿಸಿದರು. 4ನೇ ವಿಕೆಟ್​ಗೆ 87 ರನ್ ಜತೆಯಾಟವಾಡಿದ ಈ ಜೋಡಿ ತಂಡ ಸವಾಲಿನ ಮೊತ್ತ ಗಳಿಸಲು ನೆರವಾದರು. ಪಾಂಡೆ ಔಟಾದ ನಂತರ ಕ್ರೀಸ್​ಗೆ ಬಂದ ಬ್ಯಾಟ್ಸ್​ಮನ್​ಗಳು  ಅಲ್ಪ ಕಾಣಿಕೆ ನೀಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.

ಕೆಕೆಆರ್ ನೀಡಿದ 172 ರನ್ ಗುರಿ ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೆಕೆಆರ್  ವಿರುದ್ಧ 20 ರನ್​ಗಳಿಂದ ಸೋಲನುಭವಿಸಿತು. ಹೈದರಾಬಾದ್ ಪರ ಶಿಖರ್ ಧವನ್ (51) ಮಾತ್ರ ಕೊಂಚ ಪ್ರತಿರೋಧ ತೋರಿದರು. ಉಳಿದಂತೆ ಬೇರೆ ಬ್ಯಾಟ್ಸ್​ಮನ್​ಗಳು ನಿರೀಕ್ಷಿತ ಪ್ರದರ್ಶನ  ನೀಡದ ಕಾರಣ ತಂಡ ಸೋಲನುಭವಿಸಬೇಕಾಯಿತು. ಕೆಕೆಆರ್ ಪರ ಸುನಿಲ್ ನರೇನ್ 3 ಮತ್ತು ಕುಲ್​ದೀಪ್ ಯಾದವ್ 2 ವಿಕೆಟ್ ಪಡೆದರು. ಹೈದರಾಬಾದ್ ಪರ ದೀಪಕ್ ಹೂಡ (16 ಕ್ಕೆ 2)  ಪ್ರಭಾವಿ ಬೌಲಿಂಗ್ ದಾಳಿ ನಡೆಸಿದರು.

ಅಜೇಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೋಲ್ಕತಾದ ಯೂಸುಫ್ ಪಠಾಣ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com