ಐಪಿಎಲ್ ಫ್ಲೇ ಆಫ್: ಟಾಸ್ ಗೆದ್ದು ಆರ್‌ಸಿಬಿ ಬೌಲಿಂಗ್; ಆರಂಭದಲ್ಲೇ ಮುಗ್ಗರಿಸಿದ ಲಯನ್ಸ್

ಪಂದ್ಯದ ಆರಂಭದಲ್ಲೇ ಆರ್‌ಸಿಬಿ ಬೌಲರ್‌ಗಳು ಲಯನ್ಸ್ ತಂಡವನ್ನು ನಡುಗುವಂತೆ ಮಾಡಿಬಿಟ್ಟರು. ಆರಂಭಿಕ ದಾಂಡಿಗರಾಗಿ ಕ್ರೀಸ್ ಗಿಳಿದಿದ್ದ...
ಸುರೇಶ್ ರೈನಾ - ವಿರಾಟ್ ಕೊಹ್ಲಿ
ಸುರೇಶ್ ರೈನಾ - ವಿರಾಟ್ ಕೊಹ್ಲಿ
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಮಂಗಳವಾರ ಹಣಾಹಣಿ ನಡೆದಿದೆ.
ಟಾಸ್ ಗೆದ್ದ ಆರ್‌ಸಿಬಿ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡು ಲಯನ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು.
ಪಂದ್ಯದ ಆರಂಭದಲ್ಲೇ ಆರ್‌ಸಿಬಿ ಬೌಲರ್‌ಗಳು ಲಯನ್ಸ್ ತಂಡವನ್ನು ನಡುಗುವಂತೆ ಮಾಡಿಬಿಟ್ಟರು. ಆರಂಭಿಕ ದಾಂಡಿಗರಾಗಿ ಕ್ರೀಸ್ ಗಿಳಿದಿದ್ದ ಮೆಕಲಮ್ ಕೇವಲ ಒಂದು ರನ್  ಬಾರಿಸಿ ಎರಡನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಇಕ್ಬಾಲ್ ಅಬ್ದುಲ್ಲಾ ಎಸೆತಕ್ಕೆ ಡಿವಿಲಿಯರ್ಸ್ ಕ್ಯಾಚ್ ಹಿಡಿದಿದ್ದು, ಮೆಕಲಂ ಮೂಲಕ ಲಯನ್ಸ್ ಮೊದಲ ವಿಕೆಟ್ ಕಳೆದುಕೊಂಡಿತು. ಅದೇ ಓವರ್‌ನಲ್ಲಿ ಎಜೆ ಫಿಂಚ್  ಗೇಲ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ನಡೆದರು. ಹೀಗೆ ಎರಡನೇ ಓವರ್‌ನಲ್ಲಿ ಅಬ್ದುಲ್ಲಾ ಎರಡು ವಿಕೆಟ್ ಕಬಳಿಸಿ ಆರ್‌ಸಿಬಿಗೆ ಉತ್ತಮ ಆರಂಭವನ್ನೇ ನೀಡಿದರು.
ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ನಾಲ್ಕನೇ ಓವರ್‌ಲ್ಲಿ ವಾಟ್ಸನ್ ಬಾಲ್‌ಗೆ ಅರವಿಂದ್‌ಗೆ ಕ್ಯಾಚಿತ್ತು ಸುರೇಶ್ ರೈನಾ (1) ಔಟಾದರು. 
ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದು ಕೊಂಡು 9 ರನ್ ಗಳಿಸಿದ್ದ ಲಯನ್ಸ್ ತಂಡದ ಸ್ಕೋರ್‌ನ್ನು ಎರಡಂಕಿ ದಾಟಿಸಿದ್ದು ಕಾರ್ತಿಕ್ ಮತ್ತು ಡಿ ಆರ್ ಸ್ಮಿತ್.
ಈ ಸುದ್ದಿ ಅಪ್‌ಲೋಡ್ ಆಗುವ ಹೊತ್ತಿಗೆ  11 ಓವರ್ ಮುಗಿದಿದ್ದು ಕಾರ್ತಿಕ್ 
 (17) ಮತ್ತು ಡಿ ಆರ್ ಸ್ಮಿತ್ (38) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com