
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೋತಿದ್ದರಿಂದ ಹತಾಷೆಗೊಂಡ ಚಿಯರ್ ಗರ್ಲ್ಸ್ ಕಣ್ಣೀರು ಹಾಕಿದರು.
ಹೈದರಾಬಾದ್ ವಿರುದ್ಧ ಕೆಕೆಆರ್ ತಂಡ ಸೋಲಿನ ಸುಳಿಗೆ ಸಿಲುಕಿದೆ ಎಂದು ತಿಳಿದ ಚಿಯರ್ ಗರ್ಲ್ಸ್ ಕಣ್ಣೀರು ಹಾಕಿದರು. ನೋವಿನ ನಡುವೆಯೂ ಮನೀಷ್ ಪಾಂಡ್ಯೆ ಸಿಡಿಸಿದ ಬೌಂಡರಿಗಳಿಗೆ ಅಳುತ್ತಲೆ ನೃತ್ಯ ಮಾಡಿ ಅಭಿಮಾನಿಗಳನ್ನು ರಂಜಿಸಿದರು. ತಂಡ ಸೋಲುತ್ತಿದ್ದಂತೆ ಕೆಕೆಆರ್ ತಂಡ ಅಭಿಮಾನಿಗಳು ಮೌನಕ್ಕೆ ಶರಣಾದರು.
ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಕೆಕೆಆರ್ 22 ರನ್ ಗಳಿಂದ ಸೋತು ಐಪಿಎಲ್ 2016ರ ಟೂರ್ನಿಯಿಂದ ಹೊರ ನಡೆದಿದೆ.
Advertisement