ಭಾರತ-ಇಂಗ್ಲೆಂಡ್ ರಾಜ್ ಕೋಟ್ ಟೆಸ್ಟ್ ರೋಚಕ ಡ್ರಾದಲ್ಲಿ ಅಂತ್ಯ!

ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ರಾಜ್ ಕೋಟ್ ಟೆಸ್ಟ್ ರೋಚಕ ಡ್ರಾದಲ್ಲಿ ಅಂತ್ಯಕಂಡಿದೆ.
ಕೊಹ್ಲಿ ಏಕಾಂಗಿ ಹೋರಾಟ (ಕ್ರಿಕ್ ಇನ್ಫೋ ಚಿತ್ರ)
ಕೊಹ್ಲಿ ಏಕಾಂಗಿ ಹೋರಾಟ (ಕ್ರಿಕ್ ಇನ್ಫೋ ಚಿತ್ರ)

ರಾಜ್ ಕೋಟ್: ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ರಾಜ್ ಕೋಟ್ ಟೆಸ್ಟ್ ರೋಚಕ ಡ್ರಾದಲ್ಲಿ ಅಂತ್ಯಕಂಡಿದೆ.

ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನೀಡಿದ್ದ 310 ರನ್ ಗಳ ಗುರಿಯನ್ನು ಬೆನ್ನುಹತ್ತಿದ ಭಾರತ ತಂಡ ಕೊನೆಯ ದಿನದಾಟದಲ್ಲಿ 6 ವಿಕೆಟ್ ಕಳೆದುಕೊಂಡು  ಕೇವಲ 172 ರನ್ ಗಳಿಸಿತು. ಇಂಗ್ಲೆಂಡ್ ತಂಡದ ವೇಗಿಗಳ ಮಾರಕ ಬೌಲಿಂಗ್ ನಿಂದಾಗಿ ಭಾರತ ಈ ಪಂದ್ಯವನ್ನು ಸೋಲು ಕಾಣುವ ಸಾಧ್ಯತೆಗಳಿತ್ತು. 310 ರನ್ ಗಳ ಗುರಿ ಬೆನ್ನು ಹತ್ತಿದ ಭಾರತಕ್ಕೆ ಇಂಗ್ಲೆಂಡ್ ತಂಡದ ಬೌಲರ್  ರಷೀದ್ ಮಾರಕವಾಗಿ ಪರಿಣಮಿಸಿದ್ದರು. ಭಾರತದ ಪ್ರಮುಖ ಮೂರು ವಿಕೆಟ್ ಗಳನ್ನು ಕಬಳಿಸಿದ ರಷೀದ್ ಮುರಳಿ ವಿಜಯ್, ಪೂಜಾರ ಮತ್ತು ಸಾಹಾ ಅವರನ್ನು ಔಟ್ ಮಾಡಿ ಭಾರತವನ್ನು ಸೋಲಿನ ಸುಳಿಗೆ ದೂಡಿದ್ದರು.

ಆದರೆ ಈ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿದ ನಾಯಕ ವಿರಾಟ್ ಕೊಹ್ಲಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತರು. 90 ಎಸೆತಗಳನ್ನು ಎದುರಿಸಿದ ಕೊಹ್ಲಿ ಅಜೇಯ 40 ರನ್ ಗಳಿಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕೊಹ್ಲಿ  ಮಾತ್ರ ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದರು. ಕೊನೆಯ ಸೆಷನ್ ನಲ್ಲಿ ಕೊಹ್ಲಿಗೆ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡುವುದರೊಂದಿಗೆ ಈ ಜೋಡಿ 40 ರನ್ ಗಳ ಜೊತೆಯಾಟ ನೀಡಿತು. ಪರಿಣಾಮ ಭಾರತ ಸೋಲ ಬೇಕಿದ್ದ  ಪಂದ್ಯವನ್ನು ಡ್ರಾ ಮಾಡಿಕೊಂಡಿತು.

ಇಂಗ್ಲೆಂಡ್ ಪರ ರಷೀದ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರೆ, ಅಲಿ, ಅನ್ಸಾರಿ ಮತ್ತು ವೋಕ್ಸ್ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 537 ಆಲ್ ಔಟ್
ಭಾರತ ಮೊದಲ ಇನ್ನಿಂಗ್ಸ್: 488 ಆಲ್ ಔಟ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್: 230/3 ಡಿಕ್ಲೇರ್
ಭಾರತ ಎರಡನೇ ಇನ್ನಿಂಗ್ಸ್: 172/6

ಫಲಿತಾಂಶ: ಪಂದ್ಯ ಡ್ರಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com