ವಿಂಡೀಸ್‍ನ ಮಾಲ್ಕಂ ಮಾರ್ಷಲ್ ದಾಖಲೆ ಸರಿಗಟ್ಟಿದ ಆರ್, ಅಶ್ವಿನ್

ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಕೇರಂ ಸ್ಪಿನ್ನರ್ ಆರ್ ಅಶ್ವಿನ್ 5 ವಿಕೆಟ್ ಪಡೆಯುವ ಮೂಲಕ 22ನೇ ಬಾರಿಗೆ ಐದು ವಿಕೆಟ್ ಕಿತ್ತ...
ಆರ್ ಅಶ್ವಿನ್
ಆರ್ ಅಶ್ವಿನ್
ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಕೇರಂ ಸ್ಪಿನ್ನರ್ ಆರ್ ಅಶ್ವಿನ್ 5 ವಿಕೆಟ್ ಪಡೆಯುವ ಮೂಲಕ 22ನೇ ಬಾರಿಗೆ ಐದು ವಿಕೆಟ್ ಕಿತ್ತ ಸಾಧನೆ ಮಾಡಿದ್ದು ಈ ಮೂಲಕ ವೆಸ್ಟ್ ಇಂಡೀಸ್ ನ ಮಾಲ್ಕಂ ಮಾರ್ಷಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. 
ಅಶ್ವಿನ್ 41ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು ಇನ್ನಿಂಗ್ಸ್ ಒಂದರಲ್ಲಿ ಐದು ವಿಕೆಟ್ ಪಡೆದ ಸಾರ್ವಕಾಲಿಕ ಬೌಲರ್ ಪಟ್ಟಿಯಲ್ಲಿ ಅಶ್ವಿನ್ 15ನೇ ಸ್ಥಾನದಲ್ಲಿದ್ದಾರೆ. 
ಮಾಲ್ಕಂ ಮಾರ್ಷಲ್ ಪಾಕಿಸ್ತಾನದ ವಕಾರ್ ಯೂನಿಸ್, ಕರ್ಟ್ಲಿ ಅಂಬ್ರೋಸ್, ಕರ್ಟ್ಲಿ ವಾಲ್ಶ್ ಕೂಡ 22 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 
ಭಾರತದಲ್ಲಿ ಅನಿಲ್ ಕುಂಬ್ಳೆ 132 ಟೆಸ್ಟ್ ಗಳಲ್ಲಿ 35, ಹರ್ಭಜನ್ ಸಿಂಗ್ 103 ಟೆಸ್ಟ್ ಗಳಲ್ಲಿ 25, ಕಪಿಲ್ ದೇವ್ 131 ಟೆಸ್ಟ್ ಗಳಲ್ಲಿ 23 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com