ಬ್ರಿಟಿಷ್ ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡ ವಿರಾಟ್ ಕೊಹ್ಲಿ
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಚೆಂಡು ವಿರೂಪಗೊಳಿಸಿದ್ದರೆಂಬ ಬ್ರಿಟಿಷ್ ಮಾಧ್ಯಮವೊಂದರ ಆರೋಪವನ್ನು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತ್ತೊಮ್ಮೆ ಕೆದಕಿದ ಬ್ರಿಟಿಷ್ ವರದಿಗಾರನಿಗೆ ನಾಯಕ ವಿರಾಟ್ ಕೊಹ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಚೆಂಡು ವಿರೂಪದ ಘಟನೆ ನಡೆದಿದ್ದು ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಸರಣಿಯಲ್ಲಿ. ರಾಜ್ ಕೋಟ್ ಟೆಸ್ಟ್ ಬಳಿಕ, ಅಂದರೆ ವೈಜಾಗ್ ಟೆಸ್ಟ್ ನಲ್ಲಿ ನಾವು ಗೆದ್ದ ನಂತರವಷ್ಟೇ ಇಂಥ ವಿಚಾರ ಕೇಳಿದ್ದು ನನಗೆ ಅಚ್ಚರಿ ಮೂಡಿಸಿತ್ತು ಎಂದು ವಿರಾಟ್ ಖಾರವಾಗಿ ಪತ್ರಿಕ್ರಿಯಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನಿರ್ಧಾರ ಹೊರತುಪಡಿಸಿ ಪತ್ರಿಕೆಯ ಸುದ್ದಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ನಾನು ಆ ಸುದ್ದಿಯನ್ನು ಓದಿಯೂ ಇಲ್ಲ. ಈ ವಿಷಯ ಇನ್ನೊಬ್ಬರು ನನ್ನ ಬಳಿ ಬಂದು ಹೇಳಿದಾಗ ನನಗೆ ನಗು ಬಂದಿತ್ತು ಎಂದರು.
ವಿರಾಟ್ ಪ್ರತಿಕ್ರಿಯೆಯಿಂದ ಮುಖಭಂಗಕ್ಕೊಳಗಾದ ವರದಿಗಾರ, ಹಾಗಾದರೆ ಡು ಫ್ಲೆಸಿಸ್ ಮಾಡಿದ್ದನ್ನೇ ತಾನೇ ನೀವು ಮಾಡುತ್ತಿರುವುದು? ಎಂದರು ಕೇಳಿದರು. ಇದಕ್ಕೆ ಆಕ್ರೋಶಗೊಂಡ ವಿರಾಟ್ ನಾನು ಏನು ಮಾಡಿದ್ದು? ನಾನು ಏನಾದರೂ ತಪ್ಪು ಮಾಡಿದ್ದರೆ ಐಸಿಸಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿತ್ತು ಎಂದು ಉತ್ತರಿಸಿದೊಡನೆ ಬ್ರಿಟಿಷ್ ಪತ್ರಕರ್ತ ಸುನ್ಮನಾದ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ