ಜಡೇಜಾ ತಪ್ಪಿನಿಂದ ನ್ಯೂಜಿಲೆಂಡ್ ಗೆ 5 ರನ್ ವರದಾನ

ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 557 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು...
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ
Updated on
ಇಂಧೋರ್: ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 557 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಗೆ 5 ರನ್ ಗಳ ಬೋನಸ್ ಸಿಕ್ಕಿದೆ. 
ಮೊದಲ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ಖಾತೆಯಲ್ಲಿ ಐದು ರನ್ ಜಮೆಯಾಗಿದೆ. ಕಾರಣ ಭಾರತ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮುನ್ನ ಆಡುತ್ತಿದ್ದ ರವೀಂದ್ರ ಜಡೇಜಾ ರನ್ ಕಸಿಯುವ ಭರದಲ್ಲಿ ಪಿಚ್ ನ ಮಧ್ಯದಲ್ಲಿ ಓಡಿದ್ದರು. 
ಇದರಿಂದಾಗಿ ಅಂಪೈರ್ ಗಳು ನ್ಯೂಜಿಲೆಂಡ್ ಗೆ ಐದು ರನ್ ವರದಾನವಾಗಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನಿಯಮನುಸಾರ ಬ್ಯಾಟ್ ಮನ್ ಗಳು ಪಿಚ್ ನ ಮಧ್ಯಭಾಗದಲ್ಲಿ ಓಡುವಂತಿಲ್ಲ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com