ಭಾರತ
ಕ್ರಿಕೆಟ್
ನ್ಯೂಜಿಲ್ಯಾಂಡ್ ವೈಟ್‌ವಾಶ್ ಮಾಡಿದ ಟೀಂ ಇಂಡಿಯಾ
ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಕಿವೀಸ್ ತಂಡವನ್ನು ವೈಟ್‌ವಾಶ್ ಮಾಡಿದೆ.
ಇಂಧೋರ್: ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಕಿವೀಸ್ ತಂಡವನ್ನು ವೈಟ್‌ವಾಶ್ ಮಾಡಿದೆ.
ಭಾರತ ನೀಡಿದ 475 ರನ್ ಗಳ ಬೃಹತ್ ಸವಾಲು ಬೆನ್ನಟ್ಟಿದ ನ್ಯೂಜಿಲ್ಯಾಂಡ್ 153 ರನ್ ಗಳಿಗೆ ಆಲೌಟ್ ಆಗಿದ್ದು, 321 ರನ್ ಗಳ ಅಂತರದಿಂದ ಜಯಗಳಿಸಿದೆ. ಇದರೊಂದಿಗೆ ಸರಣಿಯ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆದ್ದಿದೆ. ಆರ್ ಅಶ್ವಿನ್ ಅವರ ಮಾರಕ ಸ್ಪಿನ್ ದಾಳಿಗೆ ನ್ಯೂಜಿಲೆಂಡ್ ಆಟಗಾರರು ತತ್ತರಿಸಿದರು.
ನ್ಯೂಜಿಲ್ಯಾಂಡ್ ಪರ ಲ್ಯಾಥಮ್ 6, ಗುಪ್ಟಿಲ್ 29, ವಿಲಿಯಮ್ಸನ್ 27, ಟೇಲರ್ 32, ರೊಂಚಿ 15 ಹಾಗೂ ನೀಶಂ 0, ಸ್ಯಾಟ್ನರ್ 14 ರನ್ ಗಳಿಸಿ ಔಟಾಗಿದ್ದಾರೆ.
ಭಾರತ ಪರ ಆರ್ ಅಶ್ವಿನ್ 7, ಜಡೇಜಾ 2, ಉಮೇಶ್ ಯಾದವ್ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ