ಅಮೆರಿಕದಲ್ಲಿ ಕ್ರಿಕೆಟ್ ಮಾರುಕಟ್ಟೆ ಹೆಚ್ಚಳಕ್ಕೆ ನಮ್ಮ ಆದ್ಯತೆ: ಅನುರಾಗ್ ಠಾಕೂರ್

ಅಮೆರಿಕದಲ್ಲಿ ಕ್ರಿಕೆಟ್ ಗೆ ಮಾರುಕಟ್ಟೆ ಹೆಚ್ಚಿಸುವ ಸಲುವಾಗಿ ಇತ್ತೀಚೆಗಷ್ಟೇ ಬಿಸಿಸಿಐ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ನಡುವೆ ಟಿ20 ಅಂತಾರಾಷ್ಟ್ರೀಯ...
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ವಾಷಿಂಗ್ಟನ್: ಅಮೆರಿಕದಲ್ಲಿ ಕ್ರಿಕೆಟ್ ಗೆ ಮಾರುಕಟ್ಟೆ ಹೆಚ್ಚಿಸುವ ಸಲುವಾಗಿ ಇತ್ತೀಚೆಗಷ್ಟೇ ಬಿಸಿಸಿಐ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ನಡುವೆ ಟಿ20 ಅಂತಾರಾಷ್ಟ್ರೀಯ ಸರಣಿಯನ್ನಾಡಿಸಿತ್ತು. ಇದೀಗ ಹಲವು ಸುದೀರ್ಘ ಸರಣಿಗಳನ್ನಾಡಿಸುವ ಯೋಜನೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.

ಅಮೆರಿಕದಲ್ಲಿ ಕನಿಷ್ಠ 5 ರಿಂದ 10 ವರ್ಷಗಳ ಕಾಲ ಕ್ರಿಕೆಟ್ ಸರಣಿಗಳನ್ನು ನಡೆಸುವ ಯೋಜನೆಯನ್ನು ಹಾಕಿಕೊಳ್ಳಲಾಗುತ್ತದೆ. ಇದಕ್ಕಾಗಿ ತಂಡವೊಂದನ್ನು ಅಮೆರಿಕಕ್ಕೆ ಕಳುಹಿಸಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅನುಗುಣವಾದ ಮೈದಾನಗಳ ಅವಲೋಕನ ಮಾಡಿ ವರದಿ ನೀಡಲಿದೆ ಎಂದರು.

ಕ್ರಿಕೆಟ್ ಗೆ ಅಮೆರಿಕದಲ್ಲಿ ಮಾರುಕಟ್ಟೆ ಒದಗಿಸುವ ಬಗ್ಗೆ ಗಂಭೀರವಾಗಿ ಯೋಜಿಸಲಾಗಿದೆ. ಇನ್ನು ಅಮೆರಿಕದಲ್ಲಿ ಕ್ರಿಕೆಟ್ ಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಹೀಗಾಗಿ ಮುಂದಿನ ವರ್ಷಗಳಲ್ಲಿ ಹಲವು ಪಂದ್ಯಗಳನ್ನು ಆಡಿಸಲಾಗುವುದು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಅಮೆರಿದ ಫ್ಲೋರಿಡಾದಲ್ಲಿ ಆಯೋಜಿಸಲಾಗಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂತಾರಾಷ್ಟ್ರೀ ಟಿ20 ಸರಣಿ ಒಂದು ಪ್ರಯೋಗವಾಗಿದ್ದು ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com