ಕಾನ್ಪುರ್: ಟೀಂ ಇಂಡಿಯಾ ತನ್ನ ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ 318 ರನ್ ಗಳಿಗೆ ಆಲೌಟ್ ಆಗಿದೆ.
ಗ್ರೀನ್ ಪಾರ್ಕ್ ಮೈದಾನದಲ್ಲಿ ಆರಂಭಗೊಂಡ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಅರ್ಧ ದಿನದ ವೇಳೆ 1 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಸುಸ್ತಿತಿಯಲ್ಲಿತ್ತು. ಬಳಿಕ ನ್ಯೂಜಿಲೆಂಡ್ ಬೌಲರ್ ಗಳು ಪಾರುಪತ್ಯೆ ಮೆರೆದಿದ್ದು 9 ವಿಕೆಟ್ ಗಳನ್ನು ಕಿತ್ತು 318 ರನ್ ಗಳಿಗೆ ತಂಡವನ್ನು ಆಲೌಟ್ ಮಾಡಿದೆ.
ಮೊದಲ ಇನ್ನಿಂಗ್ಸ್ ಪ್ರಾರಂಭಿಸಿರುವ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, 35 ಓವರ್ ಮುಕ್ತಾಯಕ್ಕೆ 1 ವಿಕೆಟ್ ಗೆ 123 ರನ್ ಗಳಿಸಿ ಸುಸ್ತಿತಿಯಲ್ಲಿದೆ.
ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ ಪರ ಕೆಎಲ್ ರಾಹುಲ್ 32, ವಿಜಯ್ 65, ಪೂಜಾರ 62, ವಿರಾಟ್ ಕೊಹ್ಲಿ 9, ರಹಾನೆ 18, ರೋಹಿತ್ 35, ಅಶ್ವಿನ್ 40, ರವೀಂದ್ರ ಜಡೇಜಾ 42 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್, ಸ್ಯಾಂಟ್ನರ್ ತಲಾ 3 ವಿಕೆಟ್, ವ್ಯಾಗ್ನರ್ 2 ವಿಕೆಟ್ ಪಡೆದಿದ್ದಾರೆ.