
ನವದೆಹಲಿ: ಕಳೆದ ವರ್ಷ ಇಂಡೋನೇಷ್ಯಾದ ಬಾಲಿಯಲ್ಲಿ ವಿವಾಹ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಬಾಲಿವುಡ್ ನಟಿ ಹೇಜಲ್ ಕೀಚ್ ಜೋಡಿ ನವೆಂಬರ್ 30ರಂದು ಸಪ್ತಪದಿ ತುಳಿಯಲಿದ್ದಾರೆ.
ಚಂಡೀಗಢದಲ್ಲಿ ಈ ಜೋಡಿಯ ವಿವಾಹ ಸಮಾರಂಭ ನಡೆಯಲಿದ್ದು, ಸಮಾರಂಭಕ್ಕೆ ಗಣ್ಯರಿಗೆ ಮಾತ್ರ ಅವಕಾಶವಿರುತ್ತದೆ. ಡಿಸೆಂಬರ್(5 ಅಥವಾ 7ನೇ ತಾರೀಕು) ಮೊದಲ ವಾರದಲ್ಲಿ ಆರತಕ್ಷತೆಗೆ ಸ್ನೇಹಿತರು-ಆತ್ಮೀಯರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.
34 ವರ್ಷದ ಯುವರಾಜ್ ಮತ್ತು ಬ್ರಿಟನ್ ಮೂಲದ 29 ವರ್ಷದ ಹಜೆಲ್ ಕಳೆದ 3 ವರ್ಷಗಳಿಂದ ಪರಿಚಿತರಾಗಿದ್ದರು.
Advertisement