ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಆಟಗಾರರಾದ ಶಿಖರ್ ಧವನ್, ಮುರಳಿ ವಿಜಯ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾದರು. ಬಳಿಕ ಬಂದ ಪರ ಚೇತೇಶ್ವರ ಪೂಜಾರ ಅಜೇಯ 87 ರನ್ ಹಾಗೂ ಅಜಿಂಕ್ಯ ರಹಾನೆ ರ 77 ರನ್ ಪೇರಿಸಿ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದರಿಂದ ತಪ್ಪಿಸಿದರು. ಇನ್ನು ರೋಹಿತ್ ಶರ್ಮಾ 2 ರನ್ ಗಳಿಸಿದರೆ, ಅಶ್ವಿನ್ 26 ಗಳಿಸಿ ಔಟಾದರು.