ವಿಶ್ವಕಪ್ ಗೆಲುವಿಗೆ 6 ವರ್ಷ; ಗೆಲುವಿನ ಕ್ಷಣಗಳ ಮೆಲುಕು ಹಾಕಿದ ಮಾಜಿ ಕ್ರಿಕೆಟಿಗರು!

ಭಾರತದ 28 ವರ್ಷಗಳ ಕನಸು ನನಸಾದ ಕ್ಷಣಕ್ಕೆ 6 ವರ್ಷ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಜಯಿಸಿದ ವಿಶ್ವಕಪ್ ಗೆಲುವಿಗೆ ಇಂದು 6 ವರ್ಷಗಳು ತುಂಬಿದ್ದು..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ 28 ವರ್ಷಗಳ ಕನಸು ನನಸಾದ ಕ್ಷಣಕ್ಕೆ 6 ವರ್ಷ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಜಯಿಸಿದ ವಿಶ್ವಕಪ್ ಗೆಲುವಿಗೆ ಇಂದು 6 ವರ್ಷಗಳು ತುಂಬಿದ್ದು, ಇದೇ ಖುಷಿಯಲ್ಲಿ ಮಾಜಿ ಕ್ರಿಕೆಟಿಗರು ಆ ಗೆಲುವಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಎಂಎಸ್ ಧೋನಿ ನೇತೃತ್ವದ ತಂಡ ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಘಟಾನುಘಟಿ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಏಪ್ರಿಲ್ 2 2011, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್  ಪಂದ್ಯದಲ್ಲಿ ಶ್ರೀಲಂಕಾ ತಂಡ ಎದುರಾಳಿಯಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ತಂಡ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಎಂಎಸ್  ಧೋನಿ ನೇತೃತ್ವದ ಭಾರತ ತಂಡ 48.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಐತಿಹಾಸಿಕ ಗೆಲುವು ಸಾಧಿಸಿತ್ತು. ಗೌತಮ್ ಗಂಭೀರ್ (97 ರನ್ ) ಮತ್ತು ಅಂತಿಮ ಹಂತದಲ್ಲಿ ಗೆಲುವಿನ ರನ್ ಭಾರಿಸಿದ ನಾಯಕ ಎಂಎಸ್ ಧೋನಿ  (ಅಜೇಯ 91) ಹೋರಾಟದ ಫಲವಾಗಿ ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಮುಡಿಗೇರಿತ್ತು.

ಈ ಅಭೂತಪೂರ್ವ ಕ್ಷಣಕ್ಕೆ ಇಂದು 6 ವರ್ಷ ತುಂಬಿದ್ದು, ಅಪೂರ್ವ ಕ್ಷಣಗಳನ್ನು ಮಾಜಿ ಕ್ರಿಕೆಟಿಗರು ಮೆಲುಕ ಹಾಕಿದ್ದು, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ಪೀಳಿಗೆಯ ಅತ್ಯುತ್ತಮ ನೆನಪು ಎಂದು ಟ್ವೀಟ್ ಮಾಡಿದ್ದಾರೆ.  ಅಂತೆಯೇ ಅಭೂತ ಪೂರ್ವ ಗೆಲುವು ಎಂದು ಮಹಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com