ಐಪಿಎಲ್ 10ನೇ ಆವೃತ್ತಿಗೆ ವರ್ಣರಂಜಿತ ಚಾಲನೆ

ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಗೆ ವರ್ಣರಂಜಿತ...
ಐಪಿಎಲ್ 10ನೇ ಆವೃತ್ತಿಗೆ ವರ್ಣರಂಜಿತ ಚಾಲನೆ
ಐಪಿಎಲ್ 10ನೇ ಆವೃತ್ತಿಗೆ ವರ್ಣರಂಜಿತ ಚಾಲನೆ
ಹೈದರಾಬಾದ್: ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಗೆ ವರ್ಣರಂಜಿತ ಚಾಲನೆ ಸಿಕ್ಕಿತು. 
ಕೇವಲ 21 ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ ಲಗಾನ್ ಚಿತ್ರದ ಬಾರ್ ಬಾರ್ ಹಾಂ...ಬೋಲೋ ಯಾರ್ ಹಾಂ... ಗೀತೆಯ ಮೂಲಕ ಆರಂಭಗೊಂಡಿತು. ನಂತರ 10ನೇ ಆವೃತ್ತಿಯ ವಿಶೇಷ ಸಂಭ್ರಮವಾಗಿರುವ ಕಾರಣ ಹಿಂದಿನ ಆವೃತ್ತಿಗಳ ಸಾಧನೆಗಳನ್ನು ಮೆಲುಕು ಹಾಕುವ ವಿಡಿಯೋವನ್ನು ಪ್ರದರ್ಶನ ಮಾಡಲಾಯಿತು. 
ಸಮಾರಂಭದಲ್ಲಿ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಹಾಗೂ ಸಚಿನ್ ತೆಂಡೂಲ್ಕರ್ ಅವರು ಕ್ರಮವಾಗಿ ಮೈದಾನಕ್ಕೆ ಆಗಮಿಸಿದರು. ಈ ಆಟಗಾರರನ್ನು ಕಂಡ ಪ್ರೇಕ್ಷಕರು ಜೈ ಎಂಬ ಉದ್ಘೋಷ ಕೂಗಿದರು. ನಂತರ ನಾಲ್ವರು ಆಟಗಾರರಿಗೆ ಚಿನ್ನದ ಬ್ಯಾಟ್ ಗಳನ್ನು ನೀಡಿ ಸನ್ಮಾನಿಸಲಾಯಿತು. 
ಬಾಲಿವುಡ್ ನಟಿ ಆಮಿ ಜಾಕ್ಸನ್ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಟಮ್ಮಾ ಟಮ್ಮಾ.. ಕಿಸೀ ಕೋ ಹೇ ಮೇರಾ ಪಥಾ.. ಗೀತೆಗಳಿಗೆ ಡ್ಯಾನ್ಸ್ ಮಾಡಿದರು. ಸ್ವರ್ಣ ಬಣ್ಣದ ಬಟ್ಟೆ ತೊಟ್ಟು ಆಮಿ ಕಾಲಾ ಚಷ್ಮಾ ಹಾಡಿಗೆ ನರ್ತಿಸುತ್ತಿದ್ದಂತೆ ಪ್ರೇಕ್ಷಕರು ಕರತಾಡನ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com