ಮತ್ತೆ ಸೋತ ಆರ್ ಸಿಬಿ; ಪುಣೆ ವಿರುದ್ಧ 29 ರನ್ ಗಳ ಹೀನಾಯ ಸೋಲು

ಸತತ 2 ಸೋಲುಗಳಿಂದ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ನಾಲ್ಕನೇ ಪಂದ್ಯದಲ್ಲೂ ಮತ್ತೆ ಸೋಲು ಕಾಣುವ ಮೂಲಕ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಮತ್ತೆ ಸೋತ ಆರ್ ಸಿಬಿ
ಮತ್ತೆ ಸೋತ ಆರ್ ಸಿಬಿ
ಬೆಂಗಳೂರು: ಸತತ 2 ಸೋಲುಗಳಿಂದ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ  ಐದನೇ ಪಂದ್ಯದಲ್ಲೂ ಮತ್ತೆ ಸೋಲು ಕಾಣುವ ಮೂಲಕ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಸೀಸನ್ 10 ರ 17ನೇ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರು ತಂಡ 29 ರನ್ ಗಳ ಹೀನಾಯ ಸೋಲು ಅನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪುಣೆ ತಂಡ ನಿಗದಿತ  20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳನ್ನು ಕಲೆಹಾಕಿತು, ಆ ಮೂಲಕ ಬೆಂಗಳೂರು ತಂಡಕ್ಕೆ ಗೆಲ್ಲಲ್ಲು 162 ರನ್ ಗಳ ಸವಾಲಿನ ಗುರಿ ನೀಡಿತು.
ಪುಣೆ ನೀಡಿದ 162 ರನ್ ಗಳ ಗುರಿ ಬೆನ್ನು ಹತ್ತಿದೆ ಬೆಂಗಳೂರು ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಮೊತ್ತ ಕೇವಲ 14ರನ್ ಗಳಾಗಿದ್ದಾಗ ಮನ್ ದೀಪ್ ಸಿಂಗ್ ಶೂನ್ಯಕ್ಕೆ ಠಾಕೂರ್ ಬೌಲಿಂಗ್ ನಲ್ಲಿ ಔಟ್ ಆದರು. ಏತನ್ಮಧ್ಯೆ 28 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ  ನಾಯಕ ವಿರಾಟ್ ಕೊಹ್ಲಿ ಕೂಡ ಸ್ಟೋಕ್ಸ್ ಬೌಲಿಂಗ್ ನಲ್ಲಿ ರಹಾನೆ ಕ್ಯಾಚಿತ್ತು ಹೊರ ನಡೆದರು. ಬಳಿಕ ಕ್ರೀಸ್ ಗೆ ಬಂದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ 29 ರನ್ ಗಳಿಸಿ ತಾಹಿರ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಬಳಿಕ ಜೊತೆಗೂಡಿದ ಜಾಧವ್ ಕೂಡ 10 ರನ್ ಗಳಿಸಿ  ಉನಾದ್ಕತ್ ಗೆ ಕ್ಲೀನ್ ಬೌಲ್ಡ್ ಆದರು. 14 ರನ್ ಗಳಿಸಿದ್ದ ನಾಟ್ಸನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಔಟ್ ಆದರು.
ಬಳಿಕ ಬಿನ್ನಿ ಜೊತೆಗೂಡಿದ ನೇಗಿ ಉತ್ತಮವಾಗಿ ಆಡುವ ಮುನ್ಸೂಚನೆ ನೀಡಿದರಾದರೂ ಠಾಕೂರ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಹೊರ ನಡೆದರು. ಬಳಿಕ 18 ರನ್ ಗಳಿಸಿದ್ ಬಿನ್ನಿ ಕೂಡ ಠಾಕೂರ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಎಸ್ ಬದ್ರೀ ಉನಾದ್ಕತ್ ಬೌಲಿಂಗ್ ನಲ್ಲಿ ಔಟಾದರೆ,  ಮಿಲ್ನೆಸ್ಟೋಕ್ಸ್ ಬೌಲಿಂಗ್ ನಲ್ಲಿ ಔಟ್ ಆದರು.
ಅಂತಿಮವಾಗಿ ಬೆಂಗಳೂರು ತಂಡ ನಿಗದಿತ 20 ಓರ್ ಗಳಲ್ಲಿ ಆರ್ ಸಿಬಿ 9 ವಿಕೆಟ್ ನಷ್ಟಕ್ಕೆ 134 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 29 ರನ್ ಗಳ ಹೀನಾಯ ಸೋಲು ಕಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com