ಐಪಿಎಲ್ 2017: ಗುಜರಾತ್ ವಿರುದ್ಧ ಪಂಜಾಬ್ ಗೆ 26 ರನ್ ಗಳ ಭರ್ಜರಿ ಜಯ

ಐಪಿಎಲ್ ಟೂರ್ನಿ ನಿಮಿತ್ತ ರಾಜ್ ಕೋಟ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 26 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ
Updated on

ರಾಜ್ ಕೋಟ್: ಐಪಿಎಲ್ ಟೂರ್ನಿ ನಿಮಿತ್ತ ರಾಜ್ ಕೋಟ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 26 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಪಂಜಾಬ್ ತಂಡದ ಸಂಘಟಿತ ಬೌಲಿಂಗ್ ಹಾಗೂ ತಂಡದ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಗುಜರಾತ್ ತಂಡ ಸೋಲು ಅನುಭವಿಸಿದೆ. ಪಂಜಾಬ್ ನೀಡಿದ್ದ 189 ರನ್ ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಆರಂಭಿಕ  ಆಘಾತ ಎದುರಾಗಿತ್ತು. ಕೇವಲ 6 ರನ್ ಗಳಿಸಿ ತಂಡ ಸ್ಫೋಟಕ ಆಟಗಾರ ಮೆಕ್ಕಲಮ್ ಔಟ್ ಆಗಿದ್ದರು. ಬಳಿಕ ಫಿಂಚ್ ಕೂಡ 13 ರನ್ ಗಳಿಸಿ ನಿರ್ಗಮಿಸಿದರೆ, ಬಳಿಕ ಬಂದ ಸುರೇಶ್ ರೈನಾ ಪಂಜಾಬ್ ತಂಡಕ್ಕೆ ಕೊಂಚ ಪ್ರತಿರೋಧ  ಒಡ್ಡಿದರು. ಆದರೆ 32 ರನ್ ಗಳಿಸಿದ್ದ ರೈನಾ ಪಟೇಲ್ ಬೌಲಿಂಗ್ ನಲ್ಲಿ ಭಾರಿ ಹೊಡೆತಕ್ಕೆ ಕೈಹಾಕಿ ಮ್ಯಾಕ್ಸ್ ವೆಲ್ ಕ್ಯಾಚಿತ್ತು ಹೊರ ನಡೆದರು. ಬಳಿಕ ಕಾರ್ತಿಕ್ ಜೊತೆ ಗೂಡದ ರವೀಂದ್ರ ಜಡೇಜಾ 9 ರನ್ ಗಳಿಸಿ ಔಟ್ ಆದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರು ಮತ್ತೊಂದು ತುದಿಯಲ್ಲಿ ಕ್ರೀಸ್ ನಲ್ಲಿ ಕಾರ್ತಿಕ್ ಗಟ್ಟಿಯಾಗಿ ನಿಂತು ಆಡುತ್ತಿದ್ದರು. ಜಡೇಜಾ ಬಳಿಕ ಬಂದ ಸ್ಮಿತ್ ಮತ್ತು ನಾಥ್ ಬಂದಷಅಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರೆ, ಟೈ 22 ರನ್  ಗಳಿಸಿ ನಿರ್ಗಮಿಸಿದರು. ಇದೇ ವೇಳೆ  ಕಾರ್ತಿಕ್ ಅರ್ಧಶತಕ ಸಿಡಿಸಿದರಾದರೂ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲಾಗಲಿಲ್ಲ. ಅಂತಿಮವಾಗಿ ಗುಜರಾತ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162  ರನ್ ಗಳನ್ನಷ್ಟೇ ಗಳಿಸಲ ಶಕ್ತರಾದರು. ಆ ಮೂಲಕ 26 ರನ್ ಗಳ ಅಂತರದಲ್ಲಿ ಸೋಲೊಪ್ಪಿಕೊಂಡರು.

ಇನ್ನು ಪಂಜಾಬ್ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಸಂದೀಪ್ ಶರ್ಮಾ, ಕರಿಯಪ್ಪ, ಪಟೇಲ್ ಮತ್ತು ಸ್ಟಾಯಿನ್ಸ್ ತಲಾ 2 ವಿಕೆಟ್ ಪಡೆದರೆ, ಎಂ ಶರ್ಮಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com