ಆರ್ ಸಿಬಿ ವಿರುದ್ಧ ಗುಜರಾತ್ ಲಯನ್ಸ್ ಗೆಲುವಿನ ಘರ್ಜನೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) - ಗುಜರಾತ್ ಲಯನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ಗೆಲುವು ಸಾಧಿಸಿದೆ.
ಆರ್ ಸಿಬಿ ವಿರುದ್ಧ ಗುಜರಾತ್ ಲಯನ್ಸ್ ಗೆಲುವಿನ ಘರ್ಜನೆ
ಆರ್ ಸಿಬಿ ವಿರುದ್ಧ ಗುಜರಾತ್ ಲಯನ್ಸ್ ಗೆಲುವಿನ ಘರ್ಜನೆ
Updated on
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) - ಗುಜರಾತ್ ಲಯನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ಗೆಲುವು ಸಾಧಿಸಿದೆ. 
ಪಂದ್ಯದ ಪ್ರಾರಂಭದಿಂದಲೂ ಆರ್ ಸಿಬಿ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ಗುಜರಾತ್ ಲಯನ್ಸ್ ತಂಡದ ಬ್ಯಾಟ್ಸ್ ಮನ್ ಗಳ ಸ್ಫೋಟಕ ಬ್ಯಾಟಿಂಗ್ ನಿಂದಾಗಿ ಕೇವಲ 13.5 ಓವರ್ ಗಳಲ್ಲಿ ಆರ್ ಸಿಬಿ ನೀಡಿದ 135 ರನ್ ಗಳ ಗುರಿಯನ್ನು ತಲುಪಿ 7 ವಿಕೆಟ್ ಗಳ ಜಯ ದಾಖಲಿಸಿದೆ. 
ಆರಂಭಿಕ ಆಟಗಾರರಾದ ಕಿಶನ್ 11 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರೆ, 6 ಎಸೆತಗಳಲ್ಲಿ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 
ನಂತರ ರೈನಾ ಮತ್ತು ಫಿಂಚ್ ಜೋಡಿ, ಆರ್ ಸಿಬಿ ಬೌಲರ್ ಗಳ ಎಸೆತಗಳನ್ನು ಮನಸೋ ಇಚ್ಛೆ ದಂಡಿಸಿದರು. 34 ಎಸೆತಗಳಲ್ಲಿ 72 ರನ್ ಗಳಿಸಿದ ಫಿಂಚ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಲಯನ್ಸ್ ತಂಡ   ಕೇವಲ 13.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 135 ರನ್ ಗಳ ಗುರಿ ತಲುಪಿ ಆರ್ ಸಿಬಿ ಗೆಲುವಿನ ಕನಸನ್ನು ಭಗ್ನಗೊಳಿಸಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com