ಭಾರತಕ್ಕೆ ಭಾರಿ ಹಿನ್ನಡೆ: ಪಳ್ಳೆಕೆಲೆ ಟೆಸ್ಟ್ ನಿಂದ ಜಡೇಜಾಗೆ ಐಸಿಸಿ ನಿಷೇಧ

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಭಾರತಕ್ಕೆ ಐಸಿಸಿ ದೊಡ್ಡದೊಂದು ಶಾಕ್ ನೀಡಿದ್ದು, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಟೀಂ ಇಂಡಿಯಾ ಬೌಲರ್ ರವೀಂದ್ರ ಜಡೇಜಾರ ಮೇಲೆ 1 ಟೆಸ್ಟ್ ಪಂದ್ಯದ ನಿಷೇಧ ಹೇರಿದೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಲಂಬೋ: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಭಾರತಕ್ಕೆ ಐಸಿಸಿ ದೊಡ್ಡದೊಂದು ಶಾಕ್ ನೀಡಿದ್ದು, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಟೀಂ ಇಂಡಿಯಾ ಬೌಲರ್ ರವೀಂದ್ರ ಜಡೇಜಾರ  ಮೇಲೆ 1 ಟೆಸ್ಟ್ ಪಂದ್ಯದ ನಿಷೇಧ ಹೇರಿದೆ.

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಐಸಿಸಿ ನಿಯಮ ಉಲ್ಲಂಘಿಸಿದ ಕಾರಣ ಜಡೇಜಾರನ್ನು ಶ್ರೀಲಂಕಾ ವಿರುದ್ಧದ ಮುಂದಿನ ಪಳ್ಳೆಕೆಲೆ ಟೆಸ್ಟ್ ಪಂದ್ಯ ಆಡದಿರುವಂತೆ ನಿಷೇಧ ಹೇರಲಾಗಿದೆ. ಲಂಕಾ ವಿರುದ್ಧದ 2ನೇ ಟೆಸ್ಟ್ ನ 3ನೇ ದಿನದಾಟದ ವೇಳೆ 58ನೇ ಓವರ್ ಎಸೆದ ಜಡೇಜಾ ಐಸಿಸಿ ನಿಯಮ ಉಲ್ಲಂಘಿಸಿದ್ದರು. ಜಡೇಜಾ ಎಸೆದ ಚೆಂಡನ್ನು ಲಂಕಾದ ಆಟಗಾರ ದಿಮುತ್ ಕರುಣರತ್ನೆ ರಕ್ಷಣಾತ್ಮಕವಾಗಿ ಆಡಿ ಚೆಂಡನ್ನು ಜಡೇಜಾ ಕೈ ಸೇರುವಂತೆ  ಹೊಡೆದಿದ್ದರು. ಕೂಡಲೇ ಜಡೇಜಾ ಚೆಂಡನ್ನು ಅವರತ್ತ ಥ್ರೋ ಮಾಡಿದರು. ಇದು ಬ್ಯಾಟ್ಸಮನ್ ಗೆ ತಗುಲಿಲ್ಲವಾದರೂ ಇದೊಂದು ಅಪಾಯಕಾರಿ ಥ್ರೋ ಆಗಿತ್ತು.

ಈ ಬಗ್ಗೆ ಸ್ವತಃ ಆನ್ ಫೀಲ್ಡ್ ಅಂಪೈರ್ ಜಡೇಜಾಗೆ ಎಚ್ಚರಿಕೆ ನೀಡಿದ್ದರು. ಆ ಕ್ಷಣಕ್ಕೆ ಜಡೇಜಾ ಕ್ಷಮೆ ಕೋರಿದ್ದರು. ಈ ಘಟನೆಯನ್ನು ಮ್ಯಾಚ್ ರೆಫರಿ ಐಸಿಸಿಗೆ ಮಾಹಿತಿ ನೀಡಿದ್ದರು. ಇದೀಗ ಜಡೇಜಾ ಪ್ರಕರಣವನ್ನು ಗಂಭೀರವಾಗಿ  ಪರಿಗಣಿಸಿರುವ ಐಸಿಸಿ ಅವರಿಗೆ ಒಂದು ಪಂದ್ಯದ ನಿಷೇಧ ಹೇರಿದೆ.

ಐಸಿಸಿ ನಿಯಮ ಉಲ್ಲಂಘನೆ ಇದೇ ಮೊದಲೇನಲ್ಲ
ರವೀಂದ್ರ ಜಡೇಜಾ ಐಸಿಸಿ ನಿಯಮ ಉಲ್ಲಂಘನೆ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2016ರ ಆಕ್ಟೋಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಇಂದೋರ್ ಟೆಸ್ಟ್ ಪಂದ್ಯದ ವೇಳೆಯಲ್ಲೂ ಜಡೇಜಾ ನಿಯಮ  ಉಲ್ಲಂಘಿಸಿದ್ದರು. ಈ ಅಪರಾಧಕ್ಕಾಗಿ ಅವರಿಗೆ ಪಂದ್ಯದ ಶೇ.50 ಸಂಭಾವನೆಯನ್ನು ದಂಡವಾಗಿ ವಿಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com