3ನೇ ಟೆಸ್ಟ್: ಲಂಕಾ 135ಕ್ಕೆ ಆಲೌಟ್, ಫಾಲೋಆನ್ ಗೆ ಗುರಿ ಮಾಡಿದ ಟೀಂ ಇಂಡಿಯಾ

ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಶ್ರೀಲಂಕಾ ಮೊದಲ ಇನ್ನಿಂಗ್ಸ್.....
3ನೇ ಟೆಸ್ಟ್: ಲಂಕಾ 135ಕ್ಕೆ ಆಲೌಟ್, ಫಾಲೋಆನ್ ಗೆ ಗುರಿ ಮಾಡಿದ ಟೀಂ ಇಂಡಿಯಾ
ಪಲ್ಲೆಕಿಲೆ: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಶ್ರೀಲಂಕಾ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 135ಕ್ಕೆ ಆಲೌಟ್ ಆಗಿ ಸಾಧಾರಣ ಮೊತ್ತಕ್ಕೆ ಕುಸಿದಿದೆ.
ಮೊದಲ ಇನ್ನಿಂಗ್ಸ್ ನಲ್ಲಿ 352ರನ್ ಗಳ ಬೃಹತ್ ಹಿನ್ನಡೆ ಅನುಭವಿಸಿದ ಶ್ರೀಲಂಕಾವನ್ನು ಭಾರತ ತಂಡ ಫಾಲೋ ಆನ್ ಗೆ ಒಳಪಡಿಸಿದೆ.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ಎರಡನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 19 ರನ್ ಗಳಿಸಿದೆ. 

ಇಂದು ಎರಡನೇ ದಿನದ ಆಟ ಆರಂಭಿಸಿದ್ದ ವಿರಾಟ್ ಕೊಹ್ಲಿ ಪಡೆ, ಹಾರ್ದಿಕ್ ಪಾಂಡ್ಯ ಅವರ ಭರ್ಜರಿ ಶತಕದ ನೆರವಿನೊಂದಿಗೆ 122.3 ಓವರ್ ಗಳಲ್ಲಿ ಒಟ್ಟು 487ರನ್ ಗಳಿಸಿ ಆಲೌಟ್ ಆಗಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಶಿಖರ್ ಧವನ್ 119, ರಾಹುಲ್ 85, ಅಜಿಂಕ್ಯಾ ರಹಾನೆ 16, ಚೇತೇಶ್ವರ ಪೂಜಾರ 8, ವಿರಾಟ್‌ ಕೊಹ್ಲಿ 42, ಹಾರ್ದಿಕ್ ಪಾಂಡ್ಯಾ 108, ಆರ್.ಅಶ್ವಿನ್ 31, ಕುಲದೀಪ್ ಯಾದವ್ 26, ವೃದ್ಧಿಮಾನ್ ಸಾಹ 16, ಮೊಹಮ್ಮದ್ ಶಮಿ 8, ಉಮೇಶ್ ಯಾದವ್ ಔಟಾಗದೆ 3 ರನ್ ದಾಖಲಿಸಿದರು.
ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಅದಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com