ಕ್ರಿಕೆಟ್: ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ಗೆದ್ದ ಭಾರತಕ್ಕೆ ಭರ್ಜರಿ ಸರಣಿ ಜಯ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೂರು ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಲಂಕಾ ತಂಡವನ್ನು ವೈಟ್ ವಾಷ್ ಮಾಡಿದೆ...
ಟೀಂ ಇಂಡಿಯಾ
ಟೀಂ ಇಂಡಿಯಾ
ಪಲ್ಲೆಕಿಲೆ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೂರು ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಲಂಕಾ ತಂಡವನ್ನು ವೈಟ್ ವಾಷ್ ಮಾಡಿದೆ. 
ಪಲ್ಲೆಕಿಲೆ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 171 ರನ್ ಗಳಿಂದ ಜಯ ಗಳಿಸಿದೆ. ಆ ಮೂಲಕ ವಿದೇಶಿ ನೆಲದಲ್ಲಿ ಭಾರತ ತನ್ನ 82 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. 
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 487 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಬ್ಯಾಟಿಂಗ್ ವೈಫಲ್ಯದಿಂದಾಗಿ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 135ಕ್ಕೆ ಆಲೌಟ್ ಆಗಿತ್ತು. ಇದರೊಂದಿಗೆ ಫಾಲೋ ಆನ್ ಗೆ ಒಳಪಟ್ಟ ಶ್ರೀಲಂಕಾ ಮತ್ತೆ ದ್ವಿತೀಯ ಇನ್ನಿಂಗ್ಸ್ ಪ್ರಾರಂಭಿಸಿತ್ತು. ಇಲ್ಲಿಯೂ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು 181 ರನ್ ಗಳಿಗೆ ಸರ್ವಪತನ ಕಂಡಿತು. 
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಶಿಖರ್ ಧವನ್ 119, ರಾಹುಲ್ 85, ಅಜಿಂಕ್ಯಾ ರಹಾನೆ 16, ಚೇತೇಶ್ವರ ಪೂಜಾರ 8, ವಿರಾಟ್‌ ಕೊಹ್ಲಿ 42, ಹಾರ್ದಿಕ್ ಪಾಂಡ್ಯಾ 108, ಆರ್.ಅಶ್ವಿನ್ 31, ಕುಲದೀಪ್ ಯಾದವ್ 26, ವೃದ್ಧಿಮಾನ್ ಸಾಹ 16, ಮೊಹಮ್ಮದ್ ಶಮಿ 8, ಉಮೇಶ್ ಯಾದವ್ ಔಟಾಗದೆ 3 ರನ್ ದಾಖಲಿಸಿದರು.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ಪರ ಕರುಣರತ್ನೆ 16, ಚಾಂಡಿಮಲ್ 36, ಮ್ಯಾಥ್ಯೂಸ್ 35 ಮತ್ತು ಡಿಕ್ವೇಲ್ಲಾ 41 ರನ್ ಗಳಿಸಿದ್ದಾರೆ. 
ಟೀಂ ಇಂಡಿಯಾ ಆರ್ ಅಶ್ವಿನ್ 4, ಮೊಹಮ್ಮದ್ ಶಮಿ 3, ಉಮೇಶ್ ಯಾದವ್ 2 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com