ಕೇವಲ 10 ಎಸೆತಗಳ ಅಂತರದಲ್ಲಿ 5 ವಿಕೆಟ್ ಪತನ: ಶ್ರೀಲಂಕಾದ ನಾಟಕೀಯ ಪತನ ಸೋಲಿಗೆ ಕಾರಣ

ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದ ಯಡವಟ್ಟುಗಳೇ ಆ ತಂಡದ ಸೋಲಿಗೆ ಕಾರಣವಾಯಿತು ಎಂದು ಹೇಳಬಹುದು.
ಕುಲದೀಪ್ ಯಾದವ್ ಸಂಭ್ರಮ
ಕುಲದೀಪ್ ಯಾದವ್ ಸಂಭ್ರಮ
ಇಂದೋರ್: ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದ ಯಡವಟ್ಟುಗಳೇ ಆ ತಂಡದ ಸೋಲಿಗೆ ಕಾರಣವಾಯಿತು ಎಂದು ಹೇಳಬಹುದು.
ಉಪುಲ್ ತರಂಗಾ ಮತ್ತು ಕುಸಾಲ್ ಪೆರೇರಾ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನೊಂದಿಗೆ ಉತ್ತಮ ಸ್ಥಿತಿಯಲ್ಲಿದ್ದ ಶ್ರೀಲಂಕಾ ತಂಡ ಕೇವಲ 10 ಎಸೆತಗಳ ಅಂತರದಲ್ಲಿ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಸೋಲಿಗೆ ಹತ್ತಿರವಾಗಿತ್ತು. ಚಾಹಲ್ ಮತ್ತು ಕುಲದೀಪ್  ಯಾದವ್ ಮಾರಕ ಸ್ಪಿನ್ ದಾಳಿಗೆ ತತ್ತರಿಸಿದ ಲಂಕಾ ತಂಡ 12 ಎಸೆತಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತ್ತು.
15ನೇ ಓವರ್ ನ ಮೊದಲ ಎಸೆತದಿಂದ ಶುರುವಾದ ಶ್ರೀಲಂಕಾದ ವಿಕೆಟ್ ಸರಣಿ 17.2 ಓವರ್ ಗಳ ವರೆಗೂ ಮುಂದುವರೆದಿತ್ತು. 14.1ರಲ್ಲಿ ತೀಸರಾ ಪೆರೇರಾ ಕುಲದೀಪ್ ಬೌಲಿಂಗ್ ನಲ್ಲಿ ಔಟಾದರೆ, ಅದೇ ಓವರ್ ನ ಮರು ಎಸೆತದಲ್ಲೇ ಕುಶಾಲ್ ಪೆರೇರಾ ಕೂಡ ಮನೀಷ್ ಪಾಂಡೆಗೆ ಕ್ಯಾಚ್  ನೀಡಿ ಔಟ್ ಆಗುತ್ತಾರೆ. ಬಳಿಕ 14.5ನೇ ಎಸೆತದಲ್ಲಿ ಗುಣರತ್ನೆಯನ್ನು ಧೋನಿ ಸ್ಟಂಪ್ ಔಟ್ ಮಾಡಿದರೆ, ಬಳಿಕ ಚಾಹಲ್ ಬೌಲಿಂಗ್ ನ ಮೊದಲ ಎಸೆತದಲ್ಲೇ ಡಿಸಿಲ್ವಾ ಕ್ಲೀನ್ ಬೋಲ್ಡ್ ಆಗುತ್ತಾರೆ. 15.3ನೇ ಎಸೆತದಲ್ಲಿ ಸಮರ ವಿಕ್ರಮರನ್ನು ಧೋನಿ ಆಕರ್ಷಕ ಸ್ಟಂಪ್ ಮೂಲಕ ಪೆವಿಲಿಯನ್  ಗೆ ಅಟ್ಟುತ್ತಾರೆ.
ಅದೇ ಓವರ್ ನ 5ನೇ ಎಸೆತದಲ್ಲಿ ಧನುಂಜಯ ಮನೀಷ್ ಪಾಂಡೆಗೆ ಕ್ಯಾಚ್ ನೀಡಿ ಔಟ್ ಆಗುತ್ತಾರೆ. ಅಂತಿಮವಾಗಿ 17.2ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ನಲ್ಲಿ ಚಮೀರಾ ಔಟ್ ಆಗುವುದರೊಂದಿಗೆ ಲಂಕಾ ಆಲ್ ಔಟ್ ಆಗುತ್ತದೆ. ಗಾಯಾಳು ಮ್ಯಾಥ್ಯೂಸ್ ರಿಟೈರ್ಡ್ ಹರ್ಟ್  ಆಗಿರುವುದರಿಂದ ಅವರು ಕ್ರೀಸ್ ಗೆ ಮರಳಲು ಸಾಧ್ಯವಿಲ್ಲ. ಹೀಗಾಗಿ ಭಾರತ ತಂಡ 88 ರನ್ ಗಳ ಅಂತರದಿಂದ ಲಂಕಾ ತಂಡವನ್ನು ಸೋಲಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com