ವಿಕೆಟ್ ಹಿಂದೆ ಧೋನಿ ಕ್ಷಣ ಮಾತ್ರದಲ್ಲಿ ಸ್ಟಂಪ್ ಎಗರಿಸುವುದನ್ನು ಇಂದಿಗೂ ಯಾರಿಂದಲೂ ಸರಿಗಟ್ಟುವುದಕ್ಕೆ ಸಾಧ್ಯವಿಲ್ಲ, ಯುವ ಆಟಗಾರರಲ್ಲಿ ಧೋನಿಯವರಲ್ಲಿರುವ ಗೇಮ್ ಚೇಂಜರ್ ಸಾಮರ್ಥ್ಯವನ್ನು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಅವರೂ ಹೇಳಿದ್ದಾರೆ. ಧೋನಿಯನ್ನು ಟೀಕಿಸುವವರು ಕನ್ನಡಿ ಎದುರು ನಿಂತು 36 ನೇ ವಯಸ್ಸಿನಲ್ಲಿ ನಾವೇನಾಗಿದ್ದೆವು ಎಂಬುದನ್ನು ಪ್ರಶ್ನಿಸಿಕೊಳ್ಳಲಿ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.