ವೆಸ್ಟ್ ಇಂಡೀಸ್ ಕ್ರಿಕೆಟಿಗ ಆಂಡ್ರೆ ರಸೆಲ್ಗೆ ಒಂದು ವರ್ಷ ನಿಷೇಧ

2015ರಲ್ಲಿ ಮೂರು ಬಾರಿ ವಾಡಾ ಉದ್ದೀಪನ ನಿಗ್ರಹ ನಿಯಮಾವಳಿಯನ್ನು ಉಲ್ಲಂಘಿಸಿದ್ದ ಕಾರಣಕ್ಕೆ ವೆಸ್ಟ್ ಇಂಡೀಸ್ ನ ಆಲ್ರೌಂಡರ್ ಆಂಡ್ರೆ ರಸೆಲ್ ರನ್ನು ಒಂದು ವರ್ಷ ಕಾಲ ನಿಷೇಧ...
ಆಂಡ್ರೆ ರಸೆಲ್
ಆಂಡ್ರೆ ರಸೆಲ್
ಸಿಡ್ನಿ: 2015ರಲ್ಲಿ ಮೂರು ಬಾರಿ ವಾಡಾ ಉದ್ದೀಪನ ನಿಗ್ರಹ ನಿಯಮಾವಳಿಯನ್ನು ಉಲ್ಲಂಘಿಸಿದ್ದ ಕಾರಣಕ್ಕೆ ವೆಸ್ಟ್ ಇಂಡೀಸ್ ನ ಆಲ್ರೌಂಡರ್ ಆಂಡ್ರೆ ರಸೆಲ್ ರನ್ನು ಒಂದು ವರ್ಷ ಕಾಲ ನಿಷೇಧ ವಿಧಿಸಿದೆ. 
ಕ್ರಿಕೆಟ್ ನಿಂದ ಒಂದು ವರ್ಷ ಕಾಲ ರಸೆಲ್ ರನ್ನು ಜಮೈಕಾದ ಉದ್ದೀಪನ ನಿಗ್ರಹ ಘಟಕದ ತ್ರಿಸದಸ್ಯ ಶಿಸ್ತು ಸಮಿತಿ ನಿಷೇಧ ವಿಧಿಸಿದೆ. 
28 ವರ್ಷದ ರಸೆಲ್ 2017ರ ಜನವರಿ 31 ರಿಂದ 2018ರ ಜನವರಿ 30ರವರೆಗೆ ನಿಷೇಧದಿಂದಾಗಿ ಕ್ರಿಕೆಟ್ ನಿಂದ ದೂರ ಉಳಿಯಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com