ಗ್ಲೇನ್ ಮ್ಯಾಕ್ಸ್‌ವೇಲ್
ಕ್ರಿಕೆಟ್
ಬರಿ ಒಂದು ತಂತ್ರದಿಂದ ಭಾರತೀಯ ಬೌಲರ್ ಗಳನ್ನು ನಿಭಾಯಿಸಲು ಸಾಧ್ಯವಿಲ್ಲ: ಗ್ಲೇನ್ ಮ್ಯಾಕ್ಸ್‌ವೇಲ್
ಫೆಬ್ರವರಿ 23ರಿಂದ ಆಸ್ಟ್ರೇಲಿಯಾ-ಟೀ ಇಂಡಿಯಾ ನಡುವಣ ಟೆಸ್ಟ್ ಸರಣಿ ನಡೆಯಲಿದ್ದು ಭಾರತೀಯ ಸ್ಪಿನ್ ಬೌಲರ್ ಗಳನ್ನು ಒಂದು ತಂತ್ರದಿಂದ ನಿಭಾಯಿಸಲು...
ಮೆಲ್ಬೋರ್ನ್: ಫೆಬ್ರವರಿ 23ರಿಂದ ಆಸ್ಟ್ರೇಲಿಯಾ-ಟೀ ಇಂಡಿಯಾ ನಡುವಣ ಟೆಸ್ಟ್ ಸರಣಿ ನಡೆಯಲಿದ್ದು ಭಾರತೀಯ ಸ್ಪಿನ್ ಬೌಲರ್ ಗಳನ್ನು ಒಂದು ತಂತ್ರದಿಂದ ನಿಭಾಯಿಸಲು ಸಾಧ್ಯವಿಲ್ಲ ಎಂದು ಆಸೀಸ್ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ.
ಭಾರತ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮಾರಕ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾದ ತಂಡದ ಬ್ಯಾಟ್ಸ್ ಮನ್ ಗಳು ತತ್ತರಿಸುತ್ತಾರೆ. ಹೀಗಾಗಿ ನಾವು ಸರಣಿಗೂ ಮುನ್ನ ಹಲವು ತಂತ್ರಗಳನ್ನು ಬಳಸಬೇಕಿದೆ ಎಂದರು.
ಸದ್ಯ ಟೀಂ ಇಂಡಿಯಾ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿದೆ. ಅಂತಹ ತಂಡವನ್ನು ಎದುರಿಸಬೇಕಾದರೆ ನಾವು ಹೆಚ್ಚು ಬಲಾಢ್ಯರಾಗಬೇಕಿದೆ ಎಂದು 28 ವರ್ಷದ ಗ್ಲೇನ್ ಮ್ಯಾಕ್ಸ್ ವೇಲ್ ಹೇಳಿದ್ದಾರೆ.
ಇನ್ನು ಇತ್ತಿಚೇಗಷ್ಟೆ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಆಡಿದ್ದ ಆಸ್ಟ್ರೇಲಿಯಾ ಪಾಕಿಸ್ತಾನವನ್ನು 3-0 ಅಂತರದಿಂದ ವೈಟ್ ವಾಷ್ ಮಾಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ