
ಮೆಲ್ಬೋರ್ನ್: ಟೀಂ ಇಂಡಿಯಾ ಸ್ಪಿನ್ನರ್‌ಗಳನ್ನು ಎದುರಿಸಲು ಒಂದಲ್ಲ ಒಂದು ದಾರಿ ಇದ್ದೆ ಇರುತ್ತದೆ. ಟೀಂ ಇಂಡಿಯಾದ ಸ್ಪಿನ್ ಭದ್ರಕೋಟೆಯನ್ನು ಚದುರಿಸಲು ಆಸ್ಟ್ರೇಲಿಯಾ ತಂಡ ತನ್ನದೇ ಆದ ದಾರಿಯೊಂದನ್ನು ಹುಡುಕಿಕೊಳ್ಳಲಿದೆ ಎಂಬ ಭರವಸೆಯನ್ನು ಆಸ್ಟ್ರೇಲಿಯಾ ತಂಡದ ನೂತನ ಆಟಗಾರ ಪೀಟರ್ ಹ್ಯಾಂಡ್'ಸ್ಕೂಂಬ್ ವ್ಯಕ್ತಪಡಿಸಿದ್ದಾರೆ.
ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಟೀಂ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 23ರಂದು ಆರಂಭಗೊಳ್ಳಲಿದೆ. ಇದಕ್ಕೂ ಮುನ್ನ ಕೆಲ ಮಾಜಿ ಆಟಗಾರರು ಭಾರತೀಯ ಸ್ಪಿನ್ ದಾಳಿಯನ್ನು ಹೆದರಿಸುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಿ ಎಂಬ ಸಲಹೆಗಳನ್ನು ನೀಡಿದ್ದರು. ಹೀಗಾಗಿ ಪೀಟರ್ ಯಾವುದೇ ತಂಡವನ್ನು ಮಣಿಸಲು ಒಂದಲ್ಲ ಒಂದು ದಾರಿ ಇದ್ದೆ ಇರುತ್ತದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರು ಮಾದರಿಯಲ್ಲೂ ಸರಣಿ ಜಯ ಗಳಿಸಿರುವ ಟೀಂ ಇಂಡಿಯಾ ವಿರುದ್ಧ ಸ್ಟೀವ್ ಸ್ಮಿತ್ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
Advertisement