ಐಪಿಎಲ್ ಮಾಧ್ಯಮ ಹಕ್ಕು 18 ಸಾವಿರ ಕೋಟಿ?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಮುಂದಿನ 10 ಆವೃತ್ತಿಗಳ ಮಾಧ್ಯಮ ಹಕ್ಕಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಟೆಂಡರ್ ಪ್ರಕ್ರಿಯೆ...
ಐಪಿಎಲ್
ಐಪಿಎಲ್

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಮುಂದಿನ 10 ಆವೃತ್ತಿಗಳ ಮಾಧ್ಯಮ ಹಕ್ಕಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಟೆಂಡರ್ ಪ್ರಕ್ರಿಯೆ ಆಹ್ವಾನಿಸಿದ್ದು ಅಂದಾಜು 18 ಸಾವಿರ ಕೋಟಿ ದಾಟಲಿದೆ ಎಂದು ಹೇಳಲಾಗಿದೆ.

ಸೋನಿ ಪಿಕ್ಟರ್ಸ್ ನೆಟ್ವರ್ಕ್ ಇಂಡಿಯಾ(ಎಸ್ಪಿಎನ್ಐ) ಜತೆಗಿನ ಒಪ್ಪಂದ ಈ ವರ್ಷದ ಐಪಿಎಲ್ ಬಳಿಕ ಕೊನೆಗೊಳ್ಳಲಿದೆ. ಅದರಿಂದಾಗಿ ಬಿಸಿಸಿಐ 2017ರವರೆಗಿನ ಮಾಧ್ಯಮ ಹಕ್ಕಿಗೆ ಹೊಸ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ಅಕ್ಟೋಬರ್ 25ರವರೆಗೆ ಬಿಡ್ ಅನ್ನು ಸ್ವೀಕರಿಸಲಿದೆ.

ಬಿಸಿಸಿಐನ ಹೊಸ ಒಪ್ಪಂದ ಅಂದಾಜು 18 ರಿಂದ 30 ಸಾವಿರ ಕೋಟಿ ರುಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ್ದಾಗಿರಲಿದೆ ಎಂದು ಅಂದಾಜಿಸಲಾಗಿದೆ. ನೇರಪ್ರಸಾರ ಹಕ್ಕುಗಳು ಹತ್ತು ವರ್ಷಗಳದ್ದಾಗಿದ್ದರೆ, ಡಿಜಿಟಲ್ ಹಕ್ಕುಗಳು 5 ವರ್ಷದ್ದಾಗಿದ್ದು 2022ಕ್ಕೆ ಮುಕ್ತಾಯಗೊಳ್ಳಲಿದೆ.

2008ರಲ್ಲಿ ಐಪಿಎಲ್ ಆರಂಭವಾದಾಗ ಟಿವಿ ನೇರಪ್ರಸಾರದ ಹಕ್ಕನ್ನು ಟೆಂಡರ್ ಮೂಲಕ ಆಹ್ವಾನಿಸಲಾಗಿತ್ತು. ಆಗ ಸೋನಿ ತಂಡ 10 ವರ್ಷಗಳ ಅವಧಿಗೆ 6700 ಕೋಟಿ ರುಪಾಯಿಗೆ ಒಪ್ಪಂದ ಮಾಡಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com