ನಾಯಕತ್ವ ಸ್ಥಾನದಿಂದ ಧೋನಿ ಕೈ ಬಿಟ್ಟ ಪುಣೆ!

ಐಪಿಎಲ್-2017ಗೆ ದಿನಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಪುಣೆ ತಂಡ ಶಾಕ್ ನೀಡಿದ್ದು, ತಂಡದ ನಾಯಕತ್ವದಿಂದ ಅವರನ್ನು ಕೈಬಿಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಐಪಿಎಲ್-2017ಗೆ ದಿನಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಪುಣೆ ತಂಡ ಶಾಕ್ ನೀಡಿದ್ದು, ತಂಡದ ನಾಯಕತ್ವದಿಂದ ಅವರನ್ನು ಕೈಬಿಟ್ಟಿದೆ.

2016ನೇ ಸಾಲಿನ ಐಪಿಎಲ್ ನಲ್ಲಿ ಪುಣೆ ತಂಡ ತೋರಿದ ಕಳಪೆ ಪ್ರದರ್ಶನದಿಂದಾಗಿ ತಂಡದ ಮಾಲೀಕರು ನಾಯಕ ಧೋನಿ ವಿರುದ್ಧ ಕೆಂಗಣ್ಣು ಬೀರಿದ್ದು, ಅವರನ್ನು ನಾಯಕತ್ವದಿಂದ ಕೈಬಿಟ್ಟಿದ್ದಾರೆ. ಅಲ್ಲದೆ ಅವರ ಸ್ಥಾನಕ್ಕೆ ಆಸಿಸ್  ತಂಡದ ನಾಯಕ ಸ್ಟೀವ್ ಸ್ಮಿತ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ.

2017ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಗೆ ಕೇವಲ ಎರಡೇ ದಿನ ಬಾಕಿ ಇದ್ದು ಈ ಹಂತದಲ್ಲಿ ಪುಣೆ ಮಾಲೀಕರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಈ ಬಗ್ಗೆ ಪುಣೆ ತಂಡದ ಮೂಲಗಳು ತಿಳಿಸಿರುವಂತೆ ನಾಯಕತ್ವ  ಬದಲಾವಣೆ ಕುರಿತಂತೆ ಮಾಲೀಕರು ಧೋನಿ ಅವರೊಂದಿಗೂ ಚರ್ಚೆ ನಡೆಸಿದ್ದು, ಇದಕ್ಕೆ ಧೋನಿ ಕೂಡ ಸಹಮತ ವ್ಯಕ್ತಪಡಿಸಿದ್ದಾರಂತೆ. ಅಲ್ಲದೆ ಓರ್ವ ಆಟಗಾರನಾಗಿ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು  ತಿಳಿದುಬಂದಿದೆ.

ಕಳೆದ ಐಪಿಎಲ್ ಸರಣಿಯಲ್ಲಿ ಧೋನಿ ನಾಯಕತ್ವದ ಪುಣೆ ತಂಡ ಒಟ್ಟು 14 ಪಂದ್ಯಗಳನ್ನು ಆಡಿದ್ದು, ಈ ಪೈಕಿ 5 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಸರಣಿಯಲ್ಲಿ ಒಟ್ಟು 12 ಇನ್ನಿಂಗ್ಸ್ ಗಳನ್ನು ಆಡಿದ್ದ ಧೋನಿ 284 ರನ್  ಗಳಿಸಿದ್ದರು. ಇದರಲ್ಲಿ ಒಂದು ಅರ್ಧಶತಕ ಕೂಡ ಸೇರಿದೆ.

ಈ ಹಿಂದೆ ಚೆನ್ನೈ ತಂಡದ ನಾಯಕರಾಗಿದ್ದ ಧೋನಿ 9 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com