ಹಿರಿಯ ಆಟಗಾರರನ್ನು ಧೋನಿ ಅತ್ಯುತ್ತಮವಾಗಿ ನಿರ್ವಹಿಸಿದ್ದರು: ಕುಂಬ್ಳೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ನಾಯಕತ್ವದ ಬಗ್ಗೆ ಮತ್ತೋರ್ವ ಮಾಜಿ ನಾಯಕ, ಕೋಚ್ ಅನಿಲ್ ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಿರಿಯ ಆಟಗಾರರನ್ನು ಧೋನಿ ಅತ್ಯುತ್ತಮವಾಗಿ ನಿರ್ವಹಿಸಿದ್ದರು ಎಂದಿದ್ದಾರೆ.
ಎಂಎಸ್ ಧೋನಿ- ಅನಿಲ್ ಕುಂಬ್ಳೆ (ಸಂಗ್ರಹ ಚಿತ್ರ)
ಎಂಎಸ್ ಧೋನಿ- ಅನಿಲ್ ಕುಂಬ್ಳೆ (ಸಂಗ್ರಹ ಚಿತ್ರ)
ಪುಣೆ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ನಾಯಕತ್ವದ ಬಗ್ಗೆ ಮತ್ತೋರ್ವ ಮಾಜಿ ನಾಯಕ, ಕೋಚ್ ಅನಿಲ್ ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಿರಿಯ ಆಟಗಾರರನ್ನು ಧೋನಿ ಅತ್ಯುತ್ತಮವಾಗಿ ನಿರ್ವಹಿಸಿದ್ದರು ಎಂದಿದ್ದಾರೆ. 
2008  ರಲ್ಲಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ತಾವು ರಾಜೀನಾಮೆ ನೀಡಿ ಧೋನಿ ನಾಯಕತ್ವ ವಹಿಸಿಕೊಂಡ ದಿನಗಳನ್ನು ನೆನಪಿಸಿಕೊಂಡಿರುವ ಅನಿಲ್ ಕುಂಬ್ಳೆ, ಹಿರಿಯ ಆಟಗಾರರನ್ನು ಧೋನಿ ಅವರ ನಾಯಕತ್ವದ ಅವಧಿಯಲ್ಲಿ ಅತ್ಯುತ್ತಮವಾಗಿ ನಿರ್ವಹಿಸಿದ್ದರು, ನಾಯಕತ್ವವನ್ನು ಎಂಎಸ್ ಧೋನಿ ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ಕುಂಬ್ಳೆ ಅಭಿನಂದಿಸಿದ್ದಾರೆ. 
2007 ರಿಂದ 2017 ರ ವರೆಗೆ ಎಂಎಸ್ ಧೋನಿ ನಾಯಕತ್ವವವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಓರ್ವ ನಾಯಕ ತನ್ನ ಅವಧಿಯಲ್ಲಿ ಏನೆಲ್ಲಾ ಸಾಧಿಸಲು ಸಾಧ್ಯವಿದೆಯೋ ಅವುಗಳನ್ನು ಧೋನಿ ಸಾಧಿಸಿದ್ದಾರೆ. ತಂಡದ ನಾಯಕರಾದಾಗ ಹಿರಿಯ ಆಟಗಾರರನ್ನು ನಿರ್ವಹಿಸುವುದು ಸುಲಭದ ವಿಷಯವಲ್ಲ, ಆದರೂ ಎಂಎಸ್ ಧೋನಿ ಹಿರಿಯ ಆಟಗಾರರನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರು. ಅವರು ತಂಡದಿಂದ ಅತ್ಯುತ್ತಮ ಪ್ರದರ್ಶನ ಹೊರತೆಗೆಯುವುದರ ಜೊತೆಗೆ ತಂಡಕ್ಕೆ ಎಂದಿಗೂ ಅತ್ಯುತ್ತಮವಾದದ್ದನ್ನೇ ನೀಡಿದ್ದಾರೆ ಎಂದು ಅನಿಲ್ ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಸೂಕ್ತ ಸಮಯದಲ್ಲಿ ನಾಯಕತ್ವಕ್ಕೆ ರಾಜೀನಾಮೆ: 
ಈಗಿರುವ ತಂಡದಲ್ಲಿ ಯುವರಾಜ್ ಸಿಂಗ್ ಅವರನ್ನು ಹೊರತುಪಡಿಸಿ ಎಲ್ಲರೂ ಎಂಎಸ್ ಧೋನಿ ನಾಯಕತ್ವದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದಾರೆ. ಎಂಎಸ್ ಧೋನಿ ಆ ರೀತಿಯ ಪರಿವರ್ತನೆಯನ್ನು ಎಂಎಸ್ ಧೋನಿ ಕಂಡಿದ್ದಾರೆ. ನಾಯಕತ್ವ ಬಿಟ್ಟುಕೊಡುವ ನಿರ್ಧಾರವನ್ನು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಂಎಸ್ ಧೋನಿ ನಿರ್ಧಾರ ಅವರ ನಿಸ್ವಾರ್ಥತೆಯನ್ನು ತೋರುತ್ತದೆ. ಅಂದು ಧೋನಿಗೆ ನಾಯಕತ್ವ ವಹಿಸಿಕೊಳ್ಳಲು ಸೂಕ್ತ ಸಮಯ ಎಂಬ ನನ್ನ ಅಭಿಪ್ರಾಯದಂತೆ ಈಗ ಧೋನಿಗೆ ಬಹುಶಃ ನಾಯಕತ್ವ ವಹಿಸಿಕೊಳ್ಳಲು ವಿರಾಟ್ ಕೋಹ್ಲಿಗೆ ಇದು ಸೂಕ್ತ ಸಮಯ ಎಂದೆನಿಸಿರಬೇಕು. ಆದ್ದರಿಂದ ಸೂಕ್ತ ಸಮಯದಲ್ಲಿ ಧೋನಿ ನಿರ್ಧಾರ ತೆಗೆದುಕೊಂಡಿದ್ದಾರೆ. ಟೆಸ್ಟ್ ತಂಡದ ನಾಯಕನಾಗಿ ವಿರಾಟ್ ಕೋಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ, ಇದೇ ರೀತಿ ಏಕದಿನ ಫಾರ್ಮೆಟ್ ನಲ್ಲೂ ಕೋಹ್ಲಿ ಮುಂದುವರೆಯಲಿದ್ದಾರೆ ಎಂದು ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದು, ಧೋನಿ ತಂಡದಲ್ಲಿ ಎಂದಿಗೂ ನಾಯಕನಾಗಿಯೇ ಇರಲಿದ್ದಾರೆ, ಅವರು ಭಾರತ ತಂಡಕ್ಕೆ ಸಿಕ್ಕ ಓರ್ವ ಅದ್ಭುತ ನಾಯಕ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com