

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯ ಮೂರು ಪ್ರಮುಖ ಟ್ರೋಫಿ ಗೆಲ್ಲಿಸಿಕೊಟ್ಟ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ತವರಿನ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯಲ್ಲಿ ಮತದಾನ ಮಾಡುವ ಹಕ್ಕೇ ಇಲ್ಲ.
ಜೆಎಸ್ಸಿಎ ಧೋನಿಯನ್ನು ಗೌರವ ಸದಸ್ಯರನ್ನಾಗಿಸಿದೆ. ಇದರಿಂದಾಗಿ ಧೋನಿ ಮಂಡಳಿಯ ಸಭೆಗಳಲ್ಲಾಗಲಿ, ಚುನಾವಣೆಯಲ್ಲಾಗಲಿ ಸ್ಪರ್ಧಿಸುವಂತಿಲ್ಲ. ಧೋನಿಯ ದೊಡ್ಡ ಅಭಿಮಾನಿ ಆಗಿರುವ ಜೆಎಸ್ಸಿಎ ಸದಸ್ಯ ಸುರೇಶ್ ಕುಮಾರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕನಿಗೆ ಸ್ಥಳೀಯ ಕ್ರಿಕೆಟ್ ಆಡಳಿತದಲ್ಲಿ ಕನಿಷ್ಠ ಮತದಾನ ಮಾಡುವ ಹಕ್ಕು ಇಲ್ಲದಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.