ಟೀಂ ಇಂಡಿಯಾ ಕೋಚ್ ಆಯ್ಕೆ: ರವಿ ಶಾಸ್ತ್ರಿ, ಸೆಹ್ವಾಗ್ ಸೇರಿ 6 ಜನರ ಸಂದರ್ಶನಕ್ಕೆ ವೇದಿಕೆ ಸಜ್ಜು

ಅನಿಲ್ ಕುಂಬ್ಳೆ ರಾಜಿನಾಮೆ ಬಳಿಕ ತೆರವಾಗಿದ್ದ ಟೀಂ ಇಂಡಿಯಾ ಪ್ರಧಾನ ಕೋಚ್ ಸ್ಥಾನ ಭರ್ತಿಗೆ ಅಂತೂ ಮುಹೂರ್ತ ಕೂಡಿ ಬಂದಿದ್ದು, ಸೋಮವಾರ ಸಿಎಸಿ ಸದ್ಯರ ನೇತೃತ್ವದಲ್ಲಿ ಕೋಚ್ ಆಕಾಂಕ್ಷಿಗಳ ಸಂದರ್ಶನ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಅನಿಲ್ ಕುಂಬ್ಳೆ ರಾಜಿನಾಮೆ ಬಳಿಕ ತೆರವಾಗಿದ್ದ ಟೀಂ ಇಂಡಿಯಾ ಪ್ರಧಾನ ಕೋಚ್ ಸ್ಥಾನ ಭರ್ತಿಗೆ ಅಂತೂ ಮುಹೂರ್ತ ಕೂಡಿ ಬಂದಿದ್ದು, ಸೋಮವಾರ ಸಿಎಸಿ ಸದ್ಯರ ನೇತೃತ್ವದಲ್ಲಿ ಕೋಚ್ ಆಕಾಂಕ್ಷಿಗಳ ಸಂದರ್ಶನ  ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈಗಾಗಲೇ ಟೀಂ ಇಂಡಿಯಾ ಪ್ರಧಾನ ಕೋಚ್ ಹುದ್ದೆಗೆ ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್ ಸೇರಿದಂತೆ ಒಟ್ಟು 10 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದ್ದು. ಈ ಪೈಕಿ 6 ಮಂದಿಯ ಹೆಸರುಗಳನ್ನು ಬಿಸಿಸಿಐ ಅಂತಿಮ  ಹಂತಕ್ಕೆ ಸೇರ್ಪಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾಸ್ತ್ರಿ ಹಾಗೂ ಸೆಹ್ವಾಗ್ ಹೆಸರು ಕೂಡ ಇದೆ ಎಂದು ತಿಳಿದುಬಂದಿದೆ. ಕೋಚ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರ ಹೆಸರೇ ಪ್ರಬಲ ಅಭ್ಯರ್ಥಿ  ಎಂದು ಹೇಳಲಾಗುತ್ತಿದ್ದು, ಸೆಹ್ವಾಗ್ ಕೂಡ ಶಾಸ್ತ್ರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

ಇನ್ನುಳಿದಂತೆ ಮಾಜಿ ಕ್ರಿಕೆಟಿಗರಾದ ಟಾಮ್ ಮೂಡಿ, ರಿಕಾರ್ಡೋ ಫಿಬೊಸ್, ದೊಡ್ಡಗಣೇಶ್, ಲಾಲ್ ಚಂದ್ ರಜಪೂತ್, ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್, ಒಮನ್ ಕ್ರಿಕೆಟ್ ಕೋಚ್ ರಾಕೇಶ್ ಶರ್ಮಾ, ಫಿಲ್ ಸಿಮೊನ್ಸ್, ಉಪೇಂದ್ರ  ನಾಥ್ ಬ್ರಹ್ಮಚಾರಿ ಅವರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿರುವ 10 ಮಂದಿಯ ಪಟ್ಟಿಯಲ್ಲಿದ್ದಾರೆ. ಈ ಪೈಕಿ ರವಿಶಾಸ್ತ್ರಿ, ವಿರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಸಿಮೋನ್ಸ್, ಫಿಬೊಸ್ ಮತ್ತು ರಜಪೂತ್ ಅವರು ಅಂತಿಮ 6 ಮಂದಿಯ  ಪಟ್ಟಿಗೆ ಅರ್ಹತೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಅಂತೆಯೇ ದಕ್ಷಿಣ ಆಫ್ರಿಕಾದ ಆಟಗಾರ ಕ್ಲೂಸ್ನರ್ ಅವರನ್ನೂ ಕೂಡ ಪರಿಗಣನೆಯಲ್ಲಿಟ್ಟಿದ್ದು, 6 ಮಂದಿಯಲ್ಲಿ ಯಾರೂ ಆಯ್ಕೆಯಾಗದಿದ್ದರೆ, ಕ್ಲೂಸ್ನರ್ ಅವರ ಸಂದರ್ಶನ ಪಡೆಯಲು ಕೂಡ ಬಿಸಿಸಿಐ ನಿರ್ಧರಿಸಿದೆ ಎಂದು  ತಿಳಿದುಬಂದಿದೆ.

ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರ ನಿರ್ಧಾರವೇ ಪ್ರಮುಖವಾಗಿದ್ದು, ಈ ಹಿಂದೆ ಒಮ್ಮೆ ಶಾಸ್ತ್ರಿ ಇದೇ ಸಿಎಸಿ  ಸಮಿತಿಯಿಂದ ತಿರಸ್ಕರಿಸಲ್ಪಟ್ಟಿದ್ದರು. ಆಗ ಕುಂಬ್ಳೆಗೆ ಕೋಚ್ ಹುದ್ದೆ ನೀಡಲಾಗಿತ್ತು. ಇದೀಗ 2ನೇ ಬಾರಿಗೆ ಶಾಸ್ತ್ರಿ ಅರ್ಜಿ ಸಲ್ಲಿಕೆ ಮಾಡಿದ್ದು, ಅವರೇ ಮುಂದಿನ ಕೋಚ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com