ಹೊಸ ನಿಯಮಾವಳಿ ಜಾರಿ: ಎಂಎಸ್ ಧೋನಿ, ಕ್ರಿಸ್ ಗೇಯ್ಲ್ ಬ್ಯಾಟ್ ಬದಲಾವಣೆ ಅನಿವಾರ್ಯ!

ಅಕ್ಟೋಬರ್ 1ರಿಂದ ಕ್ರಿಕೆಟ್ ನ ಹೊಸ ನಿಯಮಾವಳಿ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಖ್ಯಾತ ಕ್ರಿಕೆಟಿಗರಾದ ಎಂಎಸ್ ಧೋನಿ, ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್, ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ತಮ್ಮ ತಮ್ಮ ಬ್ಯಾಟ್ ಗಳನ್ನು ಬದಲಾಯಿಸುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಕ್ಟೋಬರ್ 1ರಿಂದ ಕ್ರಿಕೆಟ್ ನ ಹೊಸ ನಿಯಮಾವಳಿ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಖ್ಯಾತ ಕ್ರಿಕೆಟಿಗರಾದ ಎಂಎಸ್ ಧೋನಿ, ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್, ಆಸೀಸ್ ಆರಂಭಿಕ ಡೇವಿಡ್  ವಾರ್ನರ್ ತಮ್ಮ ತಮ್ಮ ಬ್ಯಾಟ್ ಗಳನ್ನು ಬದಲಾಯಿಸುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಮೆರಿಲ್​ಬೋನ್ ಕ್ರಿಕೆಟ್ ಕ್ಲಬ್​ನ (ಎಂಸಿಸಿ) ವಿಶ್ವ ಕ್ರಿಕೆಟ್ ಸಮಿತಿ ಶಿಫಾರಸಿನಂತೆ ಸಾಧಾರಣ ಅಳತೆಯ ಹಗುರ ಬ್ಯಾಟ್ ಅನ್ನು ಧೋನಿ, ಗೇಲ್ ಮುಂದಿನ ಅಕ್ಟೋಬರ್ 1ರಿಂದ ಬಳಸಬೇಕಿದೆ. ಎಂಸಿಸಿ ಹೊಸದಾಗಿ ಅಂಗೀಕರಿಸಿರುವ  ನಿಯಮದಂತೆ ಕ್ರಿಕೆಟಿಗರು ಬಳಸುವ ಬ್ಯಾಟ್ 108 ಎಂಎಂ ಅಗಲವಿರಬೇಕು, ಬ್ಯಾಟ್ ಮಧ್ಯಭಾಗ 67ಎಂಎಂ ದಪ್ಪವಿರಬೇಕು ಮತ್ತು ಬ್ಯಾಟ್ ಮೇಲ್ಬಾಗದ ದಪ್ಪ 40 ಎಂಎಂ ಮೀರಬಾರದು. ಆದರೆ ಧೋನಿ, ಗೇಯ್ಲ್, ವಾರ್ನರ್  ಬಳಸುತ್ತಿರುವ ಬ್ಯಾಟ್ ಮೇಲ್ಬಾಗ 44 ಎಂಎಂ ಅಳತೆ ಹೊಂದಿದೆ. ಹೀಗಾಗಿ ಈ ಮೂವರು ಆಟಗಾರರು ತಮ್ಮ ಬ್ಯಾಟ್ ಗಳನ್ನು ಬದಲಾಯಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಇನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ನಾಯಕ ಜೋ ರೂಟ್, ದಕ್ಷಿಣ ಆಫ್ರಿಕಾ ನಾಯಕ, ಆಸೀಸ್ ನಾಯಕ ಸ್ಟೀವನ್ ಸ್ಮಿತ್ 40 ಎಂಎಂ ಮಿತಿಯ ಬ್ಯಾಟ್​ ಅನ್ನೇ ಬಳಸುತ್ತಿರುವುದರಿಂದ  ಬದಲಾಯಿಸಬೇಕಾದ ಅಗತ್ಯವಿಲ್ಲ. ಭಾರತೀಯ ಬ್ಯಾಟ್ಸ್​ಮನ್​ ಗಳ ಪೈಕಿ ಶಿಖರ್ ಧವನ್, ಕೆಎಲ್ ರಾಹುಲ್, ರೋಹಿತ್ ಶರ್ಮ, ರಿಷಭ್ ಪಂತ್ ಬಳಸುವ ಬ್ಯಾಟ್ ಕೂಡ ನಿಯಮಕ್ಕೆ ಅನುಸಾರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com