ವೇತನ ವಿವಾದ: ಬಾಂಗ್ಲಾ ಪ್ರವಾಸ ಬಹಿಷ್ಕರಿಸಲು ಮುಂದಾದ ಆಸ್ಟ್ರೇಲಿಯಾ ಕ್ರಿಕೆಟಿಗರು

ಕ್ರಿಕೆಟ್ ಆಸ್ಟ್ರೇಲಿಯಾ ವೇತನ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂಬರುವ ಬಾಂಗ್ಲಾದೇಶ ಪ್ರವಾಸವನ್ನು ಬಹಿಷ್ಕರಿಸಲು ಆಸ್ಟ್ರೇಲಿಯಾ ಹಿರಿಯ ಕ್ರಿಕೆಟಿಗರು...
ಆಸ್ಟ್ರೇಲಿಯಾ ಆಟಗಾರರು
ಆಸ್ಟ್ರೇಲಿಯಾ ಆಟಗಾರರು
ಸಿಡ್ನಿ: ಕ್ರಿಕೆಟ್ ಆಸ್ಟ್ರೇಲಿಯಾ ವೇತನ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂಬರುವ ಬಾಂಗ್ಲಾದೇಶ ಪ್ರವಾಸವನ್ನು ಬಹಿಷ್ಕರಿಸಲು ಆಸ್ಟ್ರೇಲಿಯಾ ಹಿರಿಯ ಕ್ರಿಕೆಟಿಗರು ಮುಂದಾಗಿದ್ದಾರೆ. 
ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್, ಹಿರಿಯ ಆಟಗಾರ ಡೇವಿಡ್ ವಾರ್ನರ್ ಸೇರಿದಂತೆ ಹಲವು ಆಟಗಾರರು ಹಾಗೂ ಆಸ್ಟ್ರೇಲಿಯಾ ಕ್ರಿಕೆಟರ್ಸ್ ಅಸೋಸಿಯೇಷನ್(ಎಸಿಎ) ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. 
ಕಳೆದ ನಾಲ್ಕು ವಾರಗಳಿಂದ ಯಾವುದೇ ವೇತನವಿಲ್ಲದೆ ನಿರುದ್ಯೋಗಿಗಳಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗರು ಯಾವ ರೀತಿಯಲ್ಲಿ ಬಾಂಗ್ಲಾ ಸರಣಿಯನ್ನು ಬಹಿಷ್ಕಿಸಬೇಕು, ಇದರಿಂದ ಎಂಒಯು ವೇತನ ಒಪ್ಪಂದದ ಪ್ರಮಾಣ ಎಷ್ಟು ನಿರೀಕ್ಷೆಯಂತಿರಬೇಕು ಎಂಬಂತಹ ವಿಚಾರಗಳು ಕುರಿತು ಚರ್ಚಿಸಿದ್ದಾರೆ. ಬಾಂಗ್ಲಾ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಲಿರುವ ಆಸ್ಟ್ರೇಲಿಯಾ ಆಗಸ್ಟ್ 27ಕ್ಕೆ ಮೊದಲ ಪಂದ್ಯವಾಡಬೇಕಿತ್ತು.
ಆಸ್ಟ್ರೇಲಿಯಾ ಕ್ರಿಕೆಟ್ ಸಮಿತಿ ತನ್ನ ಪರಿಷ್ಕೃತ ಒಪ್ಪಂದದಲ್ಲಿ ಆಸೀಸ್ ಹಿರಿಯ ಹಾಗೂ ಪ್ರಥಮ ದರ್ಜೆ ಸೇರಿದಂತೆ 230 ಆಟಗಾರರಿಗೆ ಹೊಸ ಮಾದರಿಯ ಗುತ್ತಿಗೆ ನೀಡಲು ತೀರ್ಮಾನಿಸಿದ್ದರಿಂದಲೇ ಈ ಸಮಸ್ಯೆ ಎದುರಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com