ಬರ್ಮಿಂಗ್ಹ್ಯಾಮ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನಾಳೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಟೀಂ ಇಂಡಿಯಾ ವಿರುದ್ಧ ಉನ್ನತ ಮಟ್ಟದ ಕ್ರೀಡಾ ಉತ್ಸಾಹ ಪ್ರದರ್ಶಿಸಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಖ್ಯಸ್ಥ ಶಹರ್ಯಾರ್ ಖಾನ್ ಅವರು ಹಸಿರು ಬ್ರಿಗೇಡ್ ಗೆ ಶನಿವಾರ ಸಲಹೆ ನೀಡಿದ್ದಾರೆ.