ಮಳೆಯಿಂದ ಪಂದ್ಯ ರದ್ದು: ಸೋಲಿನ ದವಡೆಯಿಂದ ಆಸ್ಟ್ರೇಲಿಯಾ ಪಾರು; ಕಿವೀಸ್ ಗೆಲುವಿನಾಸೆಗೆ ತಣ್ಣೀರು

ಆಸ್ಟ್ರೇಲಿಯಾ- ನ್ಯೂಜಿಲ್ಯಾಂಡ್ ನಡುವೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೊಲಿನ ದವಡೆಗೆ ಸಿಲುಕಿತ್ತಾದರೂ ಮಳೆಯಿಂದ ಪಾರಾಗಿದೆ.
ನ್ಯೂಜಿಲ್ಯಾಂಡ್
ನ್ಯೂಜಿಲ್ಯಾಂಡ್
ಬರ್ನಿಂಗ್ ಹ್ಯಾಮ್: ಆಸ್ಟ್ರೇಲಿಯಾ- ನ್ಯೂಜಿಲ್ಯಾಂಡ್ ನಡುವೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೊಲಿನ ದವಡೆಗೆ ಸಿಲುಕಿತ್ತಾದರೂ ಮಳೆಯಿಂದ ಪಾರಾಗಿದೆ. 
33 ಓವರ್ ಗಳಲ್ಲಿ ನ್ಯೂಜಿಲ್ಯಾಂಡ್ ತಂಡ ಆಸ್ಟ್ರೇಲಿಯಾಗೆ 235 ರನ್ ಗಳ ಗುರಿಯನ್ನು ನೀಡಿತ್ತು. 9 ಓವರ್ ಗಳಿಗೆ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿ ಸಂಕಷ್ಟಕ್ಕೀಡಾಗಿದ್ದ ಆಸೀಸ್ ಗೆ ಮಳೆ ವರದಾನವಾಗಿ ಪರಿಣಮಿಸಿತು. ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿದಾಗ ಮೂರನೇ ಬಾರಿ ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಿ ಪಂದ್ಯವನ್ನು ರದ್ದುಗೊಳಿಸಲಾಯಿತು. 
ನ್ಯೂಜಿಲ್ಯಾಂಡ್ ಪರ 9 ರನ್ ನೀಡಿ 2 ವಿಕೆಟ್ ಕಬಳಿಸಿದ್ದ ಆಡಂ ಮಿಲ್ನೆ ಉತ್ತಮ ಪ್ರದರ್ಶನ ನೀಡಿದರಾದರೂ ಗೆಲುವಿನ ಆಸೆಗೆ ಮಳೆ ತಣ್ಣೀರೆರೆಚಿತು.  2013 ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಇದೇ ಮಾದರಿ ಎಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಈಗ 2017 ರಲ್ಲಿ ಇತಿಹಾಸ ಮರುಕಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com