ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ರೂ.2 ಸಾವಿರ ಕೋಟಿಗೂ ಅಧಿಕ ಬೆಟ್ಟಿಂಗ್!

ಹೈವೋಲ್ಟೇಜ್ ಪಂದ್ಯಕ್ಕೆ 2,000 ಕ್ಕೂ ಅಧಿಕ ಬೆಟ್ಟಿಂಗ್ ನಡೆದಿದೆ ಎಂದು ಅಖಿಲ ಭಾರತೀಯ ಗೇಮಿಂಗ್ ಫೆಡರೇಷನ್(ಎಐಜಿಎಫ್) ಅಂದಾಜಿಸಿದೆ.
ಭಾರತ-ಪಾಕಿಸ್ತಾನ
ಭಾರತ-ಪಾಕಿಸ್ತಾನ
ನವದೆಹಲಿ: ಜೂ.18 ರಂದು ಬ್ರಿಟನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ಭಾರತ-ಪಾಕಿಸ್ತಾನದ ನಡುವೆ ಚಾಂಪಿಯನ್ಸ್ ಟ್ರೋಫಿ 2017 ರ ಫೈನಲ್ಸ್ ಪಂದ್ಯ ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯಕ್ಕೆ 2,000 ಕ್ಕೂ ಅಧಿಕ ಬೆಟ್ಟಿಂಗ್ ನಡೆದಿದೆ ಎಂದು ಅಖಿಲ ಭಾರತೀಯ ಗೇಮಿಂಗ್ ಫೆಡರೇಷನ್(ಎಐಜಿಎಫ್) ಅಂದಾಜಿಸಿದೆ. 
ಭಾರತ ತಂಡ ಬುಕ್ಕಿಗಳ ಫೇವರೇಟ್ ತಂಡವಾಗಿದ್ದು, ಒಂದು ವೇಳೆ ಭಾರತ ಗೆದ್ದರೆ  ಭಾರತದ ಪರ 100ರೂಪಾಯಿ ಬೆಟ್ ಕಟ್ಟಿದ ವ್ಯಕ್ತಿಗೆ 147 ರೂಪಾಯಿ ವಾಪಸ್ ಸಿಗಲಿದೆ, ಒಂದು ವೇಳೆ ಪಾಕಿಸ್ತಾನ ಗೆದ್ದರೆ 300 ರೂಪಾಯಿ ಗಳಿಸಲಿದ್ದಾರೆ. 
ಒಂದು ಅಂದಾಜಿನ ಪ್ರಕಾರ ಒಂದು ವರ್ಷದಲ್ಲಿ ಭಾರತ ಆಡುವ ಪಂದ್ಯಗಳ ಮೇಲೆ ಒಟ್ಟು 2 ಲಕ್ಷ ಕೋಟಿ ರೂಪಾಯಿ ಬೆಟ್ ಕಟ್ಟಲಾಗುತ್ತದೆ ಎಂದು ಎಐಜಿಎಫ್ ನ ಸಿಇಒ ರೋಲಾಂಡ್ ಲಾಂಡರ್ಸ್ ಹೇಳಿದ್ದಾರೆ. 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫೈನಲ್ಸ್ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಅತಿ ಹೆಚ್ಚು ಬೆಟ್ಟಿಂಗ್ ನಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com