ಚಾಂಪಿಯನ್ಸ್ ಟ್ರೋಫಿ ಫೈನಲ್: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

ಭಾರಿ ನಿರೀಕ್ಷೆ ಹುಟ್ಟಿಸಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಪ್ರಾರಂಭವಾಗಿದ್ದು, ಟಾಸ್ ಗೆದ್ದಿರುವ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ
ಲಂಡನ್: ಭಾರಿ ನಿರೀಕ್ಷೆ ಹುಟ್ಟಿಸಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಪ್ರಾರಂಭವಾಗಿದ್ದು, ಟಾಸ್ ಗೆದ್ದಿರುವ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 
ಬರೊಬ್ಬರಿ 32 ವರ್ಷಗಳ ಬಳಿಕ ಏಕದಿನ ಮಾದರಿಯ ಕ್ರಿಕೆಟ್ ಸರಣಿ ಫೈನಲ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಈಗಾಗಲೇ ಲೀಗ್ ಹಂತದ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ ಫೈನಲ್ ನಲ್ಲಿ ಜಯಿಸುವ ಮೂಲಕ ತನ್ನ ಚೊಚ್ಚಲ ಏಷ್ಯಾಕಪ್ ಪ್ರಶಸ್ತಿಗೆ ಮುತ್ತಿಡಲು ಕಾತುರದಿಂದ ಕಾಯುತ್ತಿದ್ದು, ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ ತನ್ನ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ.
ಭಾರತ ಕ್ರಿಕೆಟ್ ತಂಡ: ವಿರಾಟ್ ಕೋಹ್ಲಿ(ನಾಯಕ) ಆರ್.ಅಶ್ವಿನ್, ಜೆಜೆ ಬುಮ್ರಾ, ಶಿಖರ್ ಧವನ್, ಎಂಎಸ್ ಧೋನಿ, ರವಿಂದ್ರ ಜಡೇಜಾ, ಕೇದಾರ್ ಜಾಧವ್, ಬಿ. ಕುಮಾರ್,  ಹಾರ್ದಿಕ್ ಪಾಂಡ್ಯ, ಆರ್.ಜಿ ಶರ್ಮಾ, ಯುವರಾಜ್ ಸಿಂಗ್
ಪಾಕಿಸ್ತಾನ ಕ್ರಿಕೆಟ್ ತಂಡ:  ಸರ್ಫ್ರಾಜ್ ಅಹ್ಮದ್ (ನಾಯಕ), ಅಝರ್ ಅಲಿ, ಬಾಬರ್ ಅಝಾಮ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹಸನ್ ಅಲಿ, ಇಮಾದ್ ವಾಸಿಮ್, ಜುನೈದ್ ಖಾನ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com