ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ನಿಂದ ನಿಷೇಧಿಸಿ: ಕೆಆರ್ ಕೆ ವಿವಾದಾತ್ಮಕ ಟ್ವೀಟ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ನಿಂದ ಆಜೀವ ನಿಷೇಧ ಹೇರಬೇಕು ಎಂದು ಬಾಲಿವುಡ್ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಕಮಾಲ್ ಆರ್ ಖಾನ್ ಹೇಳಿದ್ದಾರೆ.
ಟ್ವೀಟ್ ಚಿತ್ರ
ಟ್ವೀಟ್ ಚಿತ್ರ
Updated on

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ನಿಂದ ಆಜೀವ ನಿಷೇಧ ಹೇರಬೇಕು ಎಂದು ಬಾಲಿವುಡ್ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಕಮಾಲ್ ಆರ್ ಖಾನ್ ಹೇಳಿದ್ದಾರೆ.

ಲಂಡನ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 180 ರನ್ ಗಳ ಹೀನಾಯ ಸೋಲು ಕಂಡ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಕೆಆರ್ ಕೆ, ತಂಡದ ಸೋಲಿಗೆ ಭಾರತ  ತಂಡದ ನಾಯಕ ವಿರಾಟ್ ಕೊಹ್ಲಿ ಅವರೇ ಕಾರಣ. ಹೀಗಾಗಿ ಅವರನ್ನು ಭಾರತ ಕ್ರಿಕೆಟ್ ನಿಂದ ಆಜೀವ ನಿಷೇಧ ಹೇರಬೇಕು ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.

ಕೇವಲ ಕೊಹ್ಲಿಯನ್ನು ಮಾತ್ರವಲ್ಲ ಇಡೀ ಭಾರತೀಯ ಕ್ರಿಕೆಟ್ ತಂಡದ ಎಲ್ಲ ಆಟಗಾರರನ್ನೂ ನಿಷೇಧಿಸಬೇಕು. ಎಲ್ಲ ಆಟಗಾರರೂ ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಪ್ರಮುಖವಾಗಿ ತಂಡದ ನಾಯಕ ಕೊಹ್ಲಿಯನ್ನು  ಕ್ರಿಕೆಟ್ ನಿಂದ ನಿಷೇಧಿಸಬೇಕು. 130 ಕೋಟಿ ಜನರ ಭಾವನೆಗಳೊಂದಿಗೆ ಆಟವಾಡಿದ್ದು, ದೇಶದ ಜನರನ್ನು ಮೂರ್ಖರನ್ನಾಗಿಸಿದ್ದಾರೆ. ಹೀಗಾಗಿ ಎಲ್ಲರನ್ನೂ ಜೈಲಿಗೆ ಅಟ್ಟಬೇಕು. ಅಂತೆಯೇ "ಬಿಸಿಸಿಐ ಪ್ರೈವೇಟ್ ಲಿಮಿಟೆಡ್"  ಸಂಸ್ಥೆಯನ್ನು ರದ್ದುಗೊಳಿಸಬೇಕು. ಜನರನ್ನು ಮೂರ್ಖರನ್ನಾಗಿಸಿ ಕೋಟ್ಯಂತರ ಹಣ ಮಾಡುತ್ತಿರುವ ಕ್ರಿಕೆಟಿಗರ ಮೇಲೆ ಮೊಟ್ಟೆ ಮತ್ತು ಟೊಮೊಟೋ ಎಸೆಯಬೇಕು ಎಂದು ಕಿಡಿಕಾರಿದ್ದಾರೆ.

ಅಂತೆಯೇ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಧೋನಿ, ವಿರಾಟ್ ಕೊಹ್ಲಿ ಅವರನ್ನು ಉಲ್ಲೇಖಿಸಿ ನೀವು ಈ ಕೂಡಲೇ ನಿವೃತ್ತಿ ಪಡೆಯಿರಿ..ನೀವೆಲ್ಲರೂ ದೇಶದ್ರೋಹಿಗಳು ಎಂದು ಟ್ವೀಟ್ ಮಾಡಿದ್ದಾರೆ.

ಕಮಾಲ್ ಆರ್ ಖಾನ್ ಈ ಸರಣಿ ಟ್ವೀಟ್ ಗಳು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಕೇವಲ ಒಂದು ಪಂದ್ಯ ಸೋತ ಮಾತ್ರಕ್ಕೆ ಕ್ರಿಕೆಟಿಗರನ್ನು ದೇಶದ್ರೋಹಿಗಳೆಂದು ಕರೆದ ಕೆಆರ್ ಕೆಯನ್ನು ಟ್ವೀಟಿಗರು ತರಾಟೆಗೆ  ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com