ಮಹಿಳಾ ಕ್ರಿಕೆಟ್ ವಿಶ್ವಕಪ್ ಬಹುಮಾನದ ಮೊತ್ತ 10 ಪಟ್ಟು ಹೆಚ್ಚಳ!

ಮಹತ್ವದ ಬೆಳವಣಿಗೆಯಲ್ಲಿ ಮೂಲೆಗುಂಪಾಗಿದ್ದ ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಕ್ರಮ ಕೈಗೊಂಡಿದ್ದು, ಇದೇ ಜೂನ್ 24ರಿಂದ ಆರಂಭವಾಗಲಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಬಹುಮಾನದ ಮೊತ್ತವನ್ನು ಹೆಚ್ಚಳ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಮಹತ್ವದ ಬೆಳವಣಿಗೆಯಲ್ಲಿ ಮೂಲೆಗುಂಪಾಗಿದ್ದ ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಕ್ರಮ ಕೈಗೊಂಡಿದ್ದು, ಇದೇ ಜೂನ್ 24ರಿಂದ ಆರಂಭವಾಗಲಿರುವ ಮಹಿಳಾ ಕ್ರಿಕೆಟ್  ವಿಶ್ವಕಪ್ ನ ಬಹುಮಾನದ ಮೊತ್ತವನ್ನು ಹೆಚ್ಚಳ ಮಾಡಿದೆ.

ಸಾಮಾನ್ಯವಾಗಿ ಕ್ರಿಕೆಟ್‌ ಆಡಳಿತ ಸಂಸ್ಥೆಗಳು ಪುರುಷರ ಕ್ರಿಕೆಟಿಗೆ ನೀಡಿದಷ್ಟು ಪ್ರಾಧಾನ್ಯತೆಯನ್ನು ಮಹಿಳಾ ಕ್ರಿಕೆಟಿಗೆ ನೀಡುವುದಿಲ್ಲ ಎಂಬ ಅಪವಾದವಿದೆ. ಆದರೆ ಈ ಬಾರಿಯ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಈ  ಕೊರತೆ ಬಹಳ ದೊಡ್ಡ ಮಟ್ಟದಲ್ಲೇ ನೀಗಲಿದ್ದು, ಮಹಿಳಾ ಕ್ರಿಕೆಟನ್ನೂ ಜನಪ್ರಿಯಗೊಳಿಸುವ ಉದ್ದೇಶದಿಂದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಬಹುಮಾನದ ಮೊತ್ತವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಮೂಲಗಳ  ಪ್ರಕಾರ ಮಹಿಳಾ ವಿಶ್ವಕಪ್ 2017 ಟೂರ್ನಿಯ ಚಾಂಪಿಯನ್ ತಂಡಕ್ಕೆ 4 ಕೋಟಿ, 25 ಲಕ್ಷ ರು. ಬಹುಮಾನ ನೀಡುವುದಾಗಿ ಐಸಿಸಿ ಘೋಷಿಸಿದ್ದು, ರನ್ನರ್ ಅಪ್ ತಂಡಕ್ಕೆ 2 ಕೋಟಿ 12 ಲಕ್ಷ ರು. ನೀಡಲಾಗುತ್ತದೆ ಎಂದು  ಐಸಿಸಿ  ಹೇಳಿದೆ.

ಸೆಮೀಸ್ ನಲ್ಲಿ ಸೋಲುವ ತಂಡಗಳಿಗೂ ನಗದು
ಕೇವಲ ವಿಜೇತ ತಂಡ ಹಾಗೂ ರನ್ನರ್ ಅಪ್ ತಂಡಗಳು ಅಷ್ಟೇ ಅಲ್ಲ ಸೆಮಿಫೈನಲ್ ಗಳಲ್ಲಿ ಸೋಲುವ ತಂಡಗಳಿಗೂ ತಲಾ 1 ಕೋಟಿ 6 ಲಕ್ಷ ರು. ಹಣ ನೀಡುವುದಾಗಿ ಹೇಳಿದೆ. ಅಂತೆಯೇ ಗ್ರೂಪ್ ಹಂತಗಳಲ್ಲಿ ಸೋತು ಮನೆಗೆ  ತೆರಳುವ ತಂಡಗಳಿಗೂ ನಗದು ಪುರಸ್ಕಾರವಿದ್ದು, ಈ ತಂಡಗಳಿಗೆ ತಲಾ 12 ಲಕ್ಷ ರು. ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com