ಜೈಪುರ ಟ್ರಾಫಿಕ್ ಪೊಲೀಸ್ ಹೋರ್ಡಿಂಗ್: ಅಪಹಾಸ್ಯ ಕುರಿತು ಕ್ರಿಕೆಟರ್ ಬುಮ್ರಾ ಅಸಮಾಧಾನ!

ನೋಬಾಲ್ ಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ಭಾರತೀಯ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಇದೀಗ ಜೈಪುರ ಟ್ರಾಫಿಕ್ ಪೊಲೀಸರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.
ಜೈಪುರ ರಸ್ತೆಯಲ್ಲಿ ಬುಮ್ರಾ ಹೋರ್ಡಿಂಗ್ಸ್
ಜೈಪುರ ರಸ್ತೆಯಲ್ಲಿ ಬುಮ್ರಾ ಹೋರ್ಡಿಂಗ್ಸ್
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸತತ ನೋಬಾಲ್ ಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ಭಾರತೀಯ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಇದೀಗ ಜೈಪುರ ಟ್ರಾಫಿಕ್ ಪೊಲೀಸರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.
ಜೈಪುರದ ಪ್ರಮುಖ ರಸ್ತೆಯೊಂದರಲ್ಲಿ ಟ್ರಾಫಿಕ್ ಪೊಲೀಸರು ಅಳವಡಿಸಿರುವ ಸಂಚಾರ ನಿಯಮ ಪಾಲನೆಯ ಹೋರ್ಡಿಂಗ್ಸ್ ನಲ್ಲಿ ಜಸ್ ಪ್ರೀತ್ ಬುಮ್ರಾ ನೋಬಾಲ್ ಎಸೆಯುತ್ತಿರುವ ಫೋಟ ಹಾಕಿ, ಗೆರೆ ದಾಟಬೇಡಿ..ಇದು ದುಬಾರಿಯಾಗಬಹುದು ಎಂದು ಸಂಚಾರ ನಿಯಮದ ಬಗ್ಗೆ  ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಇದೀಗ ಈ ಹೋರ್ಡಿಂಗ್ಸ್ ವ್ಯಾಪಕ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಬುಮ್ರಾ ಜೈಪುರ ಪೊಲೀಸರ ವಿರುದ್ಧ ಕಿಡಿಕಾರಿದ್ದು, ದೇಶಕ್ಕಾಗಿ ಆಡುತ್ತಿರುವ ಓರ್ವ ಆಟಗಾರನನ್ನು ನೀವೆಷ್ಟು ಗೌರವಿಸುತ್ತೀರಿ ಎಂಬುದು ಇದರಿಂದ ಸಾಬೀತಾಗಿದೆ. ಚಿಂತೆ ಬೇಡ ನಿಮ್ಮ ತಪ್ಪುಗಳನ್ನು ನಾನು ಮುಂದಿಟ್ಟುಕೊಂಡು ಹಾಸ್ಯ  ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಜೂನ್‌ 18ರಂದು ನಡೆದು ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಮೊದಲ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಆದರೆ, ಈ ಪಂದ್ಯದಲ್ಲಿ ಭಾರತ ಪಾಕ್‌ ಎದುರು 180 ರನ್‌ಗಳಿಂದ ಸೋತಿತ್ತು. ಮೊದಲ ಬ್ಯಾಟಿಂಗ್‌ ಆರಂಭಿಸಿದ ಪಾಕ್‌ನ ಆರಂಭಿಕ ಆಟಗಾರ  ಫಖರ್ ಜಮಾನ್ ಬುಮ್ರಾ ಎಸೆದ ಓವರ್‌ನಲ್ಲಿ ಔಟ್‌ ಆಗಿದ್ದರು. ಆದರೆ, ಅದು ನೋಬಾಲ್‌ ಆಗಿತ್ತು. ಈ ಹಂತದಲ್ಲಿ ಜೀವದಾನ ಪಡೆದ ಫಖರ್‌ ಜಮಾನ್‌ ಶತಕ (114) ಸಿಡಿಸಿ ಸಂಭ್ರಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com