ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿ ಸಭೆಗೆ ಭಾರತದ ಪ್ರತಿನಿಧಿಯಾಗಿ ಸೌರವ್ ಗಂಗೂಲಿ

ಲಂಡನ್‌ನ ಪ್ರತಿಷ್ಠಿತ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ವಿಶ್ವ ಕ್ರಿಕೆಟ್ ಸಮಿತಿ ಸಭೆಗೆ ಭಾರತ ಪ್ರತಿನಿಧಿಯಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್...
ಸೌರವ್ ಗಂಗೂಲಿ
ಸೌರವ್ ಗಂಗೂಲಿ
ಕೋಲ್ಕತ್ತಾ: ಲಂಡನ್‌ನ ಪ್ರತಿಷ್ಠಿತ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ವಿಶ್ವ ಕ್ರಿಕೆಟ್ ಸಮಿತಿ ಸಭೆಗೆ ಭಾರತ ಪ್ರತಿನಿಧಿಯಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ತೆರಳಲಿದ್ದಾರೆ. 
ಜುಲೈ 3ರಂದು ಲಾರ್ಡ್ಸ್ ನಲ್ಲಿ ಸಭೆ ನಡೆಯಲಿದ್ದು ಸಭೆಯಲ್ಲಿ 2024ಕ್ಕೆ ಒಲಿಂಪಿಕ್ಸ್ ಮಹಾಕೂಟಕ್ಕೆ ಕ್ರಿಕೆಟ್ ಸೇರಿಸುವುದು, ಟೆಸ್ಟ್ ಪಂದ್ಯದ ದಿನಗಳನ್ನು 5 ರಿಂದ 4 ದಿನಕ್ಕೆ ಇಳಿಸುವುದು ಸೇರಿದಂತೆ ಹಲವಾರು ವಿಷಯಗಳ ಚರ್ಚೆ ನಡೆಯಲಿದೆ. 
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪ್ರಧಾನ ಕಾರ್ಯದರ್ಶಿ ದವೆ ರಿಚರ್ಡ್ಸನ್ ಅವರು ಒಲಿಂಪಿಕ್ಸ್ ನಲ್ಲಿ ಟಿ20 ಕ್ರಿಕೆಟ್ ಮಾದರಿಯನ್ನು ಅಳವಡಿಸುವ ಸಂಬಂಧ ಚರ್ಚೆ ನಡೆಸಲು ಇದು ಸಕಾಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com