3ನೇ ಬಾರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿ

ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ಬಿಸಿಸಿಐ ನೀಡುವ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾಜನರಾಗಿದ್ದು...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ಬಿಸಿಸಿಐ ನೀಡುವ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾಜನರಾಗಿದ್ದು ಇದು ಮೂರನೇ ಬಾರಿಗೆ ವಿರಾಟ್ ಪಡೆಯುತ್ತಿರುವ ಪ್ರಶಸ್ತಿಯಾಗಿದೆ. 
ಎನ್ ರಾಮ್, ರಾಮಚಂದ್ರ ಗುಹಾ ಹಾಗೂ ಡಯಾನ ಎಡುಲ್ಜಿ ಅವರನ್ನೊಳಗೊಂಡ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಆಯ್ಕೆ ಸಮಿತಿ 2015-16ನೇ ಸಾಲಿನ ಗೌರವಗಳನ್ನು ಪ್ರಕಟಿಸಿದ್ದು ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ಪ್ರತಿಷ್ಠಿತ ದಿಲೀಪ್ ಸರ್ದೇಸಾಯಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 
ಬೆಂಗಳೂರಿನಲ್ಲಿ ಮಾರ್ಚ್ 8ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 2011-12 ಮತ್ತು 2014-15ರ ಸಾಲಿನಲ್ಲಿ ವಿರಾಟ್ ಕೊಹ್ಲಿ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪ್ರಶಸ್ತಿಯನ್ನು ಮೂರನೇ ಬಾರಿಗೆ ಪಡೆಯುತ್ತಿರುವ ಮೊದಲ ಆಟಗಾರ ಎನಿಸಿದ್ದಾರೆ. 
ಇನ್ನು ಆರ್ ಅಶ್ವಿನ್ ಎರಡನೇ ಬಾರಿಗೆ ದಿಲೀಪ್ ಸರ್ದೇಸಾಯಿ ಪ್ರಶಸ್ತಿಯನ್ನು ಪಡೆಯುತ್ತಿರುವ ಮೊದಲ ಆಟಗಾರನಾಗಿದ್ದಾರೆ. 2011ರಲ್ಲಿ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯ ನಿರ್ವಹಣೆಗಾಗಿ ಈ ಗೌರವನ್ನು ಮೊದಲ ಬಾರಿಗೆ ಪಡೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com