ಪುಣೆಗಿಂತ ಬೆಂಗಳೂರು ಪಿಚ್ ಅತ್ಯುತ್ತಮವಾಗಿತ್ತು: ಐಸಿಸಿ

ಪುಣೆ ಪಿಚ್ ಅತ್ಯುತ್ತಮ ಕಳಪೆ ಪಿಚ್ ಎಂದು ಹೇಳಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಇದೀಗ ಬೆಂಗಳೂರು ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಶ್ರೇಷ್ಠ ಪಿಚ್ ಎಂದು...
ಬೆಂಗಳೂರು ಪಿಚ್
ಬೆಂಗಳೂರು ಪಿಚ್
Updated on

ನವದೆಹಲಿ: ಪುಣೆ ಪಿಚ್ ಅತ್ಯುತ್ತಮ ಕಳಪೆ ಪಿಚ್ ಎಂದು ಹೇಳಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಇದೀಗ ಬೆಂಗಳೂರು ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಶ್ರೇಷ್ಠ ಪಿಚ್ ಎಂದು ಹೇಳಿದೆ.

ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದದ್ದು ಈ ಪಂದ್ಯ ಸಹ ಪುಣೆ ಟೆಸ್ಟ್ ನಂತೆ ಕಡಿಮೆ ದಿನದಲ್ಲೇ ಪಂದ್ಯ ಅಂತ್ಯ ಕಂಡಿತ್ತು. ಇದರಿಂದ ಚಿನ್ನಸ್ವಾಮಿ ಪಿಚ್ ಕೂಡ ಕಳಪೆ ಎನ್ನಿಸಿಕೊಳ್ಳಲಿದೆಯೇ ಎಂಬ ಅನುಮಾನದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಯ ಮೊದಲ ಟೆಸ್ಟ್ ಪಂದ್ಯ ಪುಣೆಯಲ್ಲಿ ನಡೆದಿದ್ದು ಈ ಪಂದ್ಯ ಮೂರನೇ ದಿನಕ್ಕೆ ಅಂತ್ಯಕಂಡಿತ್ತು. ಇದರಿಂದ ಐಸಿಸಿ ಕಳಪೆ ಪಿಚ್ ಎಂದು ಛೀಮಾರಿ ಹಾಕಿತ್ತು.

ಐಸಿಸಿಯಲ್ಲಿ ಪಿಚ್ ಗುಣಮಟ್ಟ ನಿರ್ಧರಿಸಲು ಕೆಲವು ದರ್ಜೆಗಳಿವೆ. ಅತಿಶ್ರೇಷ್ಠ, ಶ್ರೇಷ್ಠ, ಉತ್ತಮ, ಸರಾಸರಿ, ಸರಾಸರಿಗಿಂತ ಕಡಿಮೆ, ಕಳಪೆ ಮತ್ತು ಅನರ್ಹ ಈ ವಿಭಾಗಗಳಲ್ಲಿ ಬೆಂಗಳೂರು ಪಿಚ್ 2ನೇ ಸ್ಥಾನ ಪಡೆದು ಗೌರವ ಗಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com