ಪೂಜಾರ ಬ್ಯಾಟಿಂಗ್‌ಗೆ ಸುಸ್ತಾಗಿ ಔಟ್ ತೀರ್ಪು ನೀಡಲು ಹೋಗಿ ತಲೆ ಮುಟ್ಟಿಕೊಂಡ ಅಂಪೈರ್

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರರ ಸುದೀರ್ಘ ಬ್ಯಾಟಿಂಗ್ ನಿಂದ ಸುಸ್ತಾಗಿದ್ದ ಅಂಪೈರ್ ಪೂಜಾರರ...
ಕ್ರಿಸ್ ಗಫೆನಿ
ಕ್ರಿಸ್ ಗಫೆನಿ
ರಾಂಚಿ: ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರರ ಸುದೀರ್ಘ ಬ್ಯಾಟಿಂಗ್ ನಿಂದ ಸುಸ್ತಾಗಿದ್ದ ಅಂಪೈರ್ ಪೂಜಾರರ ವಿರುದ್ಧ ಔಟ್ ತೀರ್ಪು ನೀಡಿ ಪೆವಿಲಿಯನ್ ಗೆ ಕಳುಹಿಸಿಕೊಡಬೇಕೆಂಬ ತೀರ್ಮಾನಕ್ಕೆ ಬಂದಂತ್ತಿದ್ದರು. 
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ ಸರಿಸುಮಾರು 525 ಎಸತೆಗಳನ್ನು ಎದುರಿಸಿದ್ದರು.  ಅಂದರೆ 88 ಓವರ್ ಗಳು. ಇದರಿಂದ ಬೇಸತ್ತ ನ್ಯೂಜಿಲೆಂಡ್ ಅಂಪೈರ್ ಕ್ರಿಸ್ ಗಫೆನಿ ಭಾರತದ ಇನ್ನಿಂಗ್ಸ್ ನ 140ನೇ ಓವರ್ ನಲ್ಲಿ ಜೋಶ್ ಹೆಝಲ್ವುಡ್ ಅವರ ಎಸೆದ ಚೆಂಡನ್ನು ಚೇತೇಶ್ವರ ಪೂಜಾರ ಹೂಕ್ ಮಾಡಲು ಯತ್ನಿಸಿ ವಿಫಲರಾದರು. ಚೆಂಡು ವಿಕೆಟ್ ಕೀಪರ್ ವಾಡೆ ಅವರ ಕೈ ಸೇರಿತು. ಆಗ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಅರ್ಧ ಮನಸ್ಸಿನಲ್ಲಿ ಔಟ್ ಗಾಗಿ ಮನವಿ ಮಾಡಿದರು. ಇದನ್ನು ಗಮನಿಸಿದ ಗಫೆನಿ ಹಿಂದೆ ಮುಂದೆ ನೋಡದೇ ಕೈ ಬೆರಳನ್ನು ಮೇಲಕ್ಕೆ ಎತ್ತಿ ಔಟ್ ತೀರ್ಪು ನೀಡುತ್ತಾರೆ ಎಂದು ಎಲ್ಲರು ನಿಬ್ಬೆರಗಾಗಿ ನೋಡುತ್ತಿದ್ದಾಗ ತನ್ನ ಹ್ಯಾಟ್ ಅನ್ನು ಮುಟ್ಟಿಕೊಂಡು ಸುಮ್ಮನಾದರು. ಇದು ಟಿವಿ ವೀಕ್ಷಕ ವಿವರಣೆಗಾರರು ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆಯಾಯಿತು. 
ಕ್ರಿಸ್ ಗಫೆನಿ ನ್ಯೂಜಿಲೆಂಡ್ ನ ಮಾಜಿ ಕ್ರಿಕೆಟಿಗನಾಗಿದ್ದು 83 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಎಲೈಟ್ ಅಂಪೈರ್ ಸಮಿತಿಯ ಸದಸ್ಯರಾಗಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com