ಧರ್ಮಶಾಲಾ: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಇಂದು ಟಿಬೇಟಿನ್ ಧಾರ್ಮಿಕ ಗುರು ದಲೈ ಲಾಮಾರನ್ನು ಭೇಟಿ ಮಾಡಿದರು.
ಧರ್ಮಶಾಲಾದ ಮ್ಯಾಕ್ಲಿಯೊಡ್ ಗಂಜ್ ನಲ್ಲಿ ನೆಲೆಸಿರುವ ದಲೈ ಲಾಮಾರನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭೇಟಿ ಮಾಡಿತು. ಈ ವೇಳೆ ದಲೈ ಲಾಮಾ ಅವರು ನಾಯಕ ಸ್ಟೀವ್ ಸ್ಮಿತ್ ಪಡೆಗೆ ಆಶೀರ್ವದಿಸಿದರು.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದ್ದು ಉಭಯ ತಂಡಗಳು 1-1 ಅಂತರದಿಂದ ಜಯಗಳಿಸಿ ಸಮಬಲ ಸಾಧಿಸಿವೆ. ನಾಳೆಯಿಂದ ಆರಂಭಗೊಳ್ಳಲಿರುವ ಧರ್ಮಶಾಲಾ ಟೆಸ್ಟ್ ಸರಣಿ ಗೆಲುವಿನ ಪ್ರಮುಖ ಪಾತ್ರ ವಹಿಸಿದೆ.