4ನೇ ಟೆಸ್ಟ್: ಆಸ್ಟ್ರೇಲಿಯಾ 300ಕ್ಕೆ ಆಲೌಟ್‌

ಧರ್ಮಶಾಲಾದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 88.3 ಓವರ್‌ಗಳಲ್ಲಿ....
ಧರ್ಮಶಾಲಾ: ಧರ್ಮಶಾಲಾದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 88.3 ಓವರ್‌ಗಳಲ್ಲಿ 300 ರನ್‌ ಗಳಿಸಿ ಆಲೌಟ್‌ ಆಗಿದೆ.
ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ನಾಲ್ಕನೆ ಟೆಸ್ಟ್ ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ, ನಾಯಕ ಸ್ಟೀವನ್‌ ಸ್ಮಿತ್‌(111) ಅವರ ಭರ್ಜರಿ ಶತಕದ ನೆರವಿನೊಂದಿಗೆ 300 ರನ್ ಗಳಿಗೆ ಆಲೌಟ್ ಆಯಿತು.
ನೂತನ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರು ತಮ್ಮ ಚೊಚ್ಚಲ ಪಂದ್ಯದಲ್ಲೇ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಪಡೆದು ಆಸ್ಟ್ರೇಲಿಯಾ ತಂಡವನ್ನು 300 ರನ್​ಗಳಿಗೆ ಕಟ್ಟಿಹಾಕಿದರು.
ರಾಂಚಿ ಟೆಸ್ಟ್​ನಲ್ಲಿ ಗಾಯಗೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಭುಜದ ನೋವಿನಿಂದ ಪಂದ್ಯದಿಂದ ಹೊರಗುಳಿದಿದ್ದು, ಸಹ ಆಟಗಾರರಿಗೆ ಡ್ರಿಂಕ್ಸ್ ನೀಡಲು ಅಂಗಣಕ್ಕೆ ಇಳಿಯುವ ಮೂಲಕ ಗಮನ ಸೆಳೆದರು. ಪಂದ್ಯವನ್ನು ಅಜಿಂಕ್ಯಾ ರೆಹಾನೆ ಮುನ್ನಡೆಸುತ್ತಿದ್ದಾರೆ. 4 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಕಾಯ್ದುಕೊಂಡಿವೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಪರ: ಮ್ಯಾಟ್‌ ರೆನ್‌ಷಾ 01, ಡೇವಿಡ್‌ ವಾರ್ನರ್‌ 56 , ಸ್ಟೀವನ್‌ ಸ್ಮಿತ್‌ 111, ಶಾನ್‌ ಮಾರ್ಷ್‌ 04, ಪೀಟರ್‌ ಹ್ಯಾಂಡ್ಸ್‌ಕಂಬ್‌ 08, ಮ್ಯಾಥ್ಯೂ ವೇಡ್‌ 57,  ಪ್ಯಾಟ್‌ ಕಮಿನ್ಸ್‌ 21, ಸ್ಟೀವ್‌ ಓ ಕೀಫ್‌ 08, ನೇಥನ್‌ ಲಾಯನ್‌ 13, ಜೋಶ್‌ ಹ್ಯಾಜಲ್‌ವುಡ್‌ ಬ್ಯಾಟಿಂಗ್‌ 02 ರನ್‌ ಗಳಿಸಿದ್ದಾರೆ.
ಭಾರತದ ಪರ: ಕುಲದೀಪ್‌ ಯಾದವ್‌ 4, ಭುವನೇಶ್ವರ್‌ ಕುಮಾರ್‌ 1, ಉಮೇಶ್‌ ಯಾದವ್‌ 2, ರವೀಂದ್ರ ಜಡೇಜ 1, ಆರ್‌. ಅಶ್ವಿನ್‌ 1 ವಿಕೆಟ್‌ ಪಡೆದರು.

Related Stories

No stories found.

Advertisement

X
Kannada Prabha
www.kannadaprabha.com