'ಐಪಿಎಲ್ ಇತಿಹಾಸದಲ್ಲೆ ನಾ ಕಂಡ ಒಳ್ಳೆಯ ಇನ್ನಿಂಗ್ಸ್': ರಿಷಭ್ ಬಿರುಸಿನ ಆಟಕ್ಕೆ ಸಚಿನ ಮೆಚ್ಚುಗೆ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಇತಿಹಾಸದಲ್ಲೇ ನಾ ಕಂಡ ಅದ್ಭುತ ಇನ್ನಿಂಗ್ಸ್ ಎಂದರೇ ಅದು ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ರಿಷಭ್ ಪಂತ್‌ರದ್ದು ಎಂದು ಕ್ರಿಕೆಟ್ ದಿಗ್ಗಜ...
ರಿಷಭ್ ಪಂತ್-ಸಚಿನ್ ತೆಂಡೂಲ್ಕರ್
ರಿಷಭ್ ಪಂತ್-ಸಚಿನ್ ತೆಂಡೂಲ್ಕರ್
Updated on: 
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಇತಿಹಾಸದಲ್ಲೇ ನಾ ಕಂಡ ಅದ್ಭುತ ಇನ್ನಿಂಗ್ಸ್ ಎಂದರೇ ಅದು ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ರಿಷಭ್ ಪಂತ್‌ರದ್ದು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. 
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಿನ್ನೆ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ 43 ಎಸೆತಗಳಲ್ಲಿ 97 ರನ್ ಗಳನ್ನು ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್ ತೆಂಡೂಲ್ಕರ್ ಐಪಿಎಲ್ ಇತಿಹಾಸದಲ್ಲೇ ನಾನು ಕಂಡ ಅದ್ಭುತ ಇನ್ನಿಂಗ್ಸ್, ರಿಷಭ್ ಪಂತ್ ಅವರ ಅದ್ಭುತ ಆಟ ಎಂದು ಹಾಡಿಹೊಗಳಿದ್ದಾರೆ. 
ರಿಷಭ್ ಪಂತ್ ಭರ್ಜರಿ ಬೌಂಡರ್ ಮತ್ತು ಸಿಕ್ಸರ್ ನೊಂದಿಗೆ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಅವರು 43 ಎಸೆತಗಳಲ್ಲಿ 97 ರನ್ ಗಳನ್ನು ಸಿಡಿಸಿದ್ದರು. ರಿಷಭ್ ಪಂತ್ ಅವರ ಉತ್ಯುತ್ತಮ ಆಟವನ್ನು ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸೌರವ್ ಗಂಗೂಲಿ ಸೇರಿದಂತೆ ಹಲವರು ಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com