ಶ್ರೀನಿವಾಸನ್ ವಿರುದ್ಧ ಹರಿಹಾಯ್ದ ಲಲಿತ್ ಮೋದಿ; ಚೆನ್ನೈ ತಂಡದಲ್ಲಿ ಧೋನಿ ಪಾತ್ರದ ಕುರಿತು ದಾಖಲೆ ಬಿಡುಗಡೆ!

ಇಂಡಿಯನ್ ಪ್ರೀಮಿಯರ್ ಲೀಗ್ ನ ಮಾಜಿ ಆಯುಕ್ತ ಲಲಿತ್ ಮೋದಿ ಮತ್ತೆ ಸುದ್ದಿಯಲ್ಲಿದ್ದು, ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಮತ್ತು ಸಿಎಸ್ ಕೆ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಪಾತ್ರ ಮತ್ತು ಆದಾಯದ ಕುರಿತಂತೆ ದಾಖಲೆ ಬಿಡುಗಡೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ ಮಾಜಿ ಆಯುಕ್ತ ಲಲಿತ್ ಮೋದಿ ಮತ್ತೆ ಸುದ್ದಿಯಲ್ಲಿದ್ದು, ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಮತ್ತು ಸಿಎಸ್ ಕೆ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಪಾತ್ರ ಮತ್ತು ಆದಾಯದ ಕುರಿತಂತೆ ದಾಖಲೆ ಬಿಡುಗಡೆ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರೂ ಕೂಡ ಆಗಿದ್ದ ಎನ್.ಶ್ರೀನಿವಾಸನ್ ಅವರ ‘ಇಂಡಿಯಾ ಸಿಮೆಂಟ್ಸ್’ ಕಂಪನಿಯಲ್ಲಿ ಉದ್ಯೋಗಿಯಾಗಿ ಧೋನಿ ಅವರನ್ನು ನೇಮಕ ಮಾಡಿಕೊಂಡಿರುವ ಒಪ್ಪಂದದ ವಿವರವನ್ನು ಟ್ವಿಟ್ಟರ್  ನಲ್ಲಿ ಲಲಿತ್ ಮೋದಿ ಪೋಸ್ಟ್ ಮಾಡಿದ್ದಾರೆ. ಪೋಸ್ಚ್ ನಲ್ಲಿ ಲಲಿತ್ ಮೋದಿ "2012ರ ಜುಲೈ 29ರಂದು ಮಾಡಿಕೊಂಡಿರುವ ಒಪ್ಪಂದ ಇದಾಗಿದ್ದು, ಧೋನಿಗೆ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಹುದ್ದೆಯನ್ನು ಆಫರ್ ಮಾಡಲಾಗಿದೆ.  ಅಂತೆಯೇ ಒಪ್ಪಂದದ ಪ್ರಕಾರ ಧೋನಿಯ ವೇತನ ತಿಂಗಳಿಗೆ 43,000 ರುಪಾಯಿ ಮತ್ತು 21,970 ರುಪಾಯಿ ಭತ್ಯೆ ಕೊಡಲಾಗುತ್ತಿತ್ತು. ಒಂದು ಅಂದಾಜಿನ ಅನ್ವಯ ಧೋನಿ ವಾರ್ಷಿಕ ಸುಮಾರು 100 ಕೋಟಿ ಆದಾಯ  ಪಡೆಯುತ್ತಿದ್ದರು. ಆ ಮೂಲಕ ಶ್ರೀನಿವಾಸನ್ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.



ಅಂತೆಯೇ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಅಕ್ರಮದ ಮೇಲೆ ಅಕ್ರಮ ಎಸಗುತ್ತಿದ್ದು, ವರ್ಷಕ್ಕೆ ನೂರಾರು ಕೋಟಿ ಸಂಪಾದಿಸುವ ಧೋನಿ, ಶ್ರೀನಿವಾಸನ್ ಕೈಕೆಳಗೆ ನೌಕರರಾಗಿ ದುಡಿಯಲು ಒಪ್ಪಿರುವುದು ನಿಜವೇ ಎಂದು ಲಲಿತ್ ಮೋದಿ ಪ್ರಶ್ನಿಸಿದ್ದಾರೆ.  ಅಲ್ಲದೆ ಇಂತಹ ಸಾಕಷ್ಟು ಒಪ್ಪಂದಗಳಾಗಿರಬಹುದು ಎಂದೂ ಲಲಿತ್ ಮೋದಿ ಶಂಕೆ ವ್ಯಕ್ತಪಡಿಸಿದ್ದಾರೆ.

ಸದ್ಯ ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿದ್ದು, ಈ ಹಿಂದೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ತಂಡಕ್ಕೆ ವಿಧಿಸಲಾಗಿರುವ 2 ವರ್ಷಗಳ  ನಿಷೇಧ ಅವಧಿ ಮುಗಿದ ಬಳಿಕ ಧೋನಿ ಮತ್ತೆ ಸಿಎಸ್ ಕೆ ಗೆ ಮರಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com