ವಿಶ್ವ ದಾಖಲೆ ಆಟ: ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಬಿಸಿಸಿಐ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಚತುಷ್ಕೋನ ಏಕದಿನ ಸರಣಿಯಲ್ಲಿ ಭಾರತ ಮಹಿಳಾ ತಂಡ ಹಲವು ವಿಶ್ವ ದಾಖಲೆಗಳನ್ನು ಮಾಡಿದ್ದು ಇದನ್ನು ಭಾರತೀಯ ಕ್ರಿಕೆಟ್...
ಭಾರತ ಕ್ರಿಕೆಟ್ ಮಹಿಳಾ ತಂಡ
ಭಾರತ ಕ್ರಿಕೆಟ್ ಮಹಿಳಾ ತಂಡ
ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಚತುಷ್ಕೋನ ಏಕದಿನ ಸರಣಿಯಲ್ಲಿ ಭಾರತ ಮಹಿಳಾ ತಂಡ ಹಲವು ವಿಶ್ವ ದಾಖಲೆಗಳನ್ನು ಮಾಡಿದ್ದು ಇದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶ್ಲಾಘಿಸಿದೆ. 
ಟೂರ್ನಿಯಲ್ಲಿ ಭಾರತದ ಮಹಿಳಾ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದೀಪ್ತಿ ಶರ್ಮ ಮತ್ತು ಪೂನಂ ರಾವತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೆ ವೇಗಿ ಜೂಲನ್ ಗೋಸ್ವಾಮಿ ಅತೀ ಹೆಚ್ಚು ವಿಕೆಟ್ ಪಡೆದ ಖ್ಯಾತಿಗೆ ಪಾತ್ರರಾಗಿದ್ದು ತಂಡವನ್ನು ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ಅಭಿನಂದಿಸಿದ್ದಾರೆ. 
ಟೂರ್ನಿಯ 4ನೇ ಲೀಗ್ ಪಂದ್ಯದಲ್ಲಿ ಭಾರತ ಐರ್ಲೆಂಡ್ ವಿರುದ್ಧ 249 ರನ್ ಗಳ ಭರ್ಜರಿ ಜಯ ಗಳಿಸಿದೆ. ಜತೆಗೆ ಭಾರತ ಇದೇ ಮೊದಲ ಬಾರಿಗೆ ವಿಕೆಟ್ ನಷ್ಟವಿಲ್ಲದೆ 320 ಗರಿಷ್ಠ ರನ್ ಜತೆಯಾಟದ ದಾಖಲೆ ಮಾಡಿದೆ. ಮಹಿಳಾ ಕ್ರಿಕೆಟ್ ನಲ್ಲಿ ದಾಖಲಾದ ಮೊಟ್ಟಮೊದಲ 300 ಪ್ಲಸ್ ರನ್ ಜತೆಯಾಟ ಇದಾಗಿದೆ. 
ಟೀಂ ಇಂಡಿಯಾದ ಆರಂಭಿಕರಾದ ದೀಪ್ತಿ ಶರ್ಮ ಮತ್ತು ಪೂನಂ ರಾವತ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ದೀಪ್ತಿ 188 ರನ್ ಗಳನ್ನು ಸಿಡಿಸಿದರೆ ಪೂನಂ 109 ರನ್ ಸಿಡಿಸಿದ್ದರು. ಇದರೊಂದಿಗೆ ಭಾರತ 3 ವಿಕೆಟ್ ನಷ್ಟಕ್ಕೆ 358 ರನ್ ಗಳನ್ನು ದಾಖಲಿಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com