ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ? ಅಭಿಮಾನಿ ಪ್ರಶ್ನೆಗೆ ಧೋನಿ ತಬ್ಬಿಬ್ಬು!

2015ರಿಂದ ಕಾಡುತ್ತಿದ್ದ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ ಏಪ್ರಿಲ್ 28ರಂದು ಉತ್ತರ ಸಿಕ್ಕಿದ್ದು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ...
ಎಂಎಸ್ ಧೋನಿ
ಎಂಎಸ್ ಧೋನಿ
Updated on
ಮುಂಬೈ: 2015ರಿಂದ ಕಾಡುತ್ತಿದ್ದ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ ಏಪ್ರಿಲ್ 28ರಂದು ಉತ್ತರ ಸಿಕ್ಕಿದ್ದು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಮಾತ್ರ ಇನ್ನು ಉತ್ತರ ಲಭ್ಯವಾಗಿಲ್ಲ. 
ಧೋನಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಇದ್ದಕ್ಕಿದ್ದಂತೆ ಅಭಿಮಾನಿಗಳು ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇದಕ್ಕೆ ಜಾಣ್ಮೆಯಿಂದ ಉತ್ತರಿಸಿದ ಧೋನಿ ನಾನು ಅದೇ ಪ್ರಶ್ನೆಯನ್ನು ಎಲ್ಲರನ್ನು ಕೇಳುತ್ತಿದ್ದೇನೆ ಆದರೆ ಯಾರು ನನಗೆ ಉತ್ತರ ನೀಡುತ್ತಿಲ್ಲ ಎಂದು ಹಾಸ್ಯ ಮಾಡಿದ್ದಾರೆ. 
ಧೋನಿಗೆ ಇನ್ನು ಬಾಹುಬಲಿ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಿಲ್ಲವಂತೆ. ಇನ್ನೊಂದೆಡೆ ಧೋನಿ ಅಭಿಮಾನಿಗಳು ಧೋನಿಯನ್ನು ಬಾಹುಬಲಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುತ್ತಿದ್ದು ಪೋಸ್ಟ್ ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com